ಸಾಂದರ್ಭಿಕ ಚಿತ್ರ  
ಜಿಲ್ಲೆ

ಕಾವೇರಿಯಲ್ಲಿ ಮುಳುಗಿ ಐವರು ವಿದ್ಯಾರ್ಥಿಗಳ ಸಾವು

ಗಂಗಾಧರ ಬಿ ವಿ

ರಾಮನಗರ: ಕಾವೇರಿ ನದಿಯಲ್ಲಿ ಈಜಲು ಇಳಿದಿದ್ದ ಬೆಂಗಳೂರಿನ ಐವರು ಕಾಲೇಜು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಧಾರುಣ ಘಟನೆ ನಡೆದಿದೆ.

ಕನಕಪುರ ತಾಲೂಕಿನ ಪ್ರಸಿದ್ದ ಪ್ರವಾಸಿ ತಾಣ ಸಂಗಮಕ್ಕೆ ಸೋಮವಾರ ಪ್ರವಾಸಕ್ಕೆ 11 ಮಂದಿ ಕಾಲೇಜು ವಿದ್ಯಾರ್ಥಿಗಳು ಪ್ರವಾಸಕ್ಕೆ ಬಂದಿದ್ದರು ಎಂದು ಮಾಹಿತಿ ಲಭ್ಯವಾಗಿದ್ದು, ಇವರಲ್ಲಿ ಸಂಗಮ  ಮೇಕೆದಾಟು ಮಧ್ಯೆ ಒಂದು ಸ್ಥಳದಲ್ಲಿ ಹೆಚ್ಚು ನೀರಿದ್ದ ಕಡೆ ಕೆಲವರು ಜಲ ಕ್ರೀಡೆಗೆ ಇಳಿದಿದ್ದು, ಈ ವೇಳೆ ಸುಳಿಯಲ್ಲಿ ಸಿಲುಕಿ ಬೆಂಗಳೂರಿನ ಪೀಣ್ಯ 2ನೇ ಹಂತದ ಅಭಿಷೇಕ್, ತೇಜಸ್, ಹರ್ಷಿತ, ಸ್ನೇಹಾ ಮತ್ತು ವರ್ಷಾಮೃತಪಟ್ಟಿದ್ದಾರೆ.

ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸ್ ಸಿಬ್ಬಂದಿ, ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳೀಯ ಈಜುಗಾರರನ್ನು ಬೆಳಕೆ ಮಾಡಿಕೊಂಡು ಮೃತ ದೇಹಗಳನ್ನು ಹೊರ ತೆಗೆದಿದ್ದಾರೆ. ಈ ಸಂಬಂಧ ಸಾತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.