ಜಿಲ್ಲೆ

ಕರ್ತವ್ಯಲೋಪವೆಸಗಿದ ಹಿನ್ನೆಲೆ: ಐವರು ಅಬಕಾರಿ ಅಧಿಕಾರಿಗಳು ಸಸ್ಪೆಂಡ್

ಹರೀಶ್​​ ಕೆ.ಸಿ.

ಬೆಂಗಳೂರು: ಕರ್ತವ್ಯಲೋಪವೆಸಗಿದ ಹಿನ್ನೆಲೆಯಲ್ಲಿ ಐವರು ಅಬಕಾರಿ ಅಧಿಕಾರಿಗಳನ್ನು ಅಮಾನತುಗೊಳಿಸಿ ಆರ್ಥಿಕ ಇಲಾಖೆ(ಅಬಕಾರಿ ) ಆದೇಶಿಸಿದೆ.

ಬಿಯುಡಿ-4 ಅಬಕಾರಿ ಉಪ ಆಯುಕ್ತ ಶಿವಲಿಂಗಪ್ಪ ಬನಹಟ್ಟಿ, ಅಧೀಕ್ಷಕ ಸೈಯದ್ ಶಹಾಬುದ್ದೀನ್ ಬೊಕಾರಿ, ಉಪ ಅಧೀಕ್ಷಕ ಅಬೂಬಕರ್ ಎ. ಮುಜಾವರ್, ಸಂಪಂಗಿರಾಮನಗರ (ವಲಯ- 22) ನಿರೀಕ್ಷಕ ಎಲ್.ಮಧುಸೂದನ್ ಮತ್ತು ಪ್ರಥಮ ದರ್ಜೆ ಸಹಾಯಕಿ ಶೀತಲ್ ಅಮಾನತುಗೊಂಡ ಅಧಿಕಾರಿಗಳು.

ರೇಸ್ ಕೋರ್ಸ್ ರಸ್ತೆಯ ಬೆಂಗಳೂರು ಟರ್ ಕ್ಲಬ್ ಆವರಣದಲ್ಲಿ ಸಿಎಲ್-4 ಸನ್ನದು ಪರಿಷ್ಕೃತ ನೀಲಿ ನಕಾಶೆ ಅನುಮೋದನೆ ಸಂಬಂಧ ಉದ್ದೇಶಪೂರ್ವಕವಾಗಿ ಈ ಅಧಿಕಾರಿಗಳು ವಿಳಂಬಗೊಳಿಸಿ ಕರ್ತವ್ಯ ಲೋಪವೆಸಗಿರುವುದು ಕಂಡುಬಂದಿತ್ತು. ಹಾಗಾಗಿ, ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮ ಅನ್ವಯ ಮೇಲಿನ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿದೆ. ಇವರನ್ನು ಜಂಟಿ ಇಲಾಖಾ ವಿಚಾರಣೆ ನಡೆಸಲು ಅಬಕಾರಿ ಆಯುಕ್ತರನ್ನು ಶಿಸ್ತು ಪ್ರಾಧಿಕಾರವನ್ನಾಗಿ ನೇಮಿಸಲಾಗಿದೆ. ಅಮಾನತ್ತು ಅವಧಿಯಲ್ಲಿ ಅಧಿಕಾರಿ ಮತ್ತು ನೌಕರರು, ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಪಡೆಯದೆ ಕೇಂದ್ರ ಸ್ಥಾನ ಬಿಡುವಂತಿಲ್ಲ.