ಜಿಲ್ಲೆ

ಸಿಡಿಲಿಗೆ ಐದು ಹಸುಗಳು ಬಲಿ

ವೀರೇಶ ಸೌದ್ರಿ

ಮುಂಡಗೋಡ: ತಾಲೂಕಿನಾದ್ಯಂತ ಶುಕ್ರವಾರ ಸಂಜೆ ಉತ್ತಮ ಮಳೆ ಸುರಿದಿದ್ದು, ಬಿಸಿಲಿನಿಂದ ಬಸವಳಿದಿದ್ದ ಜನತೆಗೆ ತಂಪೆರೆದಿದೆ.
ಶುಕ್ರವಾರ ಸಂಜೆಯ ವೇಳೆಗೆ ಬಿರುಗಾಳಿಯೊಂದಿಗೆ ಆರಂಭವಾದ ಮಳೆ ಉತ್ತಮವಾಗಿ ಸುರಿಯಿತು.

ಮಳೆಯ ಆರಂಭಕ್ಕೂ ಮುನ್ನ ಬೀಸಿದ ಬಿರುಗಾಳಿಗೆ ತಾಲೂಕಿನ ನಂದಿಗಟ್ಟ ಪಂಚಾಯಿತಿ ವ್ಯಾಪ್ತಿಯ ಹುಲಿಹೊಂಡ ಗ್ರಾಮದ ಬಸವರಾಜ ನಡವಿನಮನಿ ಎಂಬವರ ಪಪ್ಪಾಯಿ ಗಿಡಗಳು ನೆಲಕಚ್ಚಿವೆ. ಸುಳ್ಳಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದ ಮುಂಭಾಗದ ಮೇಲ್ಚಾವಣಿ ಹಾರಿ ಹೋಗಿ ಹಾನಿ ಸಂಭವಿಸಿದೆ.
ಪಾಳಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲಕೊಪ್ಪ ಗ್ರಾಮದಲ್ಲಿ ಶುಕ್ರವಾರ ಸಂಜೆ ಸಿಡಿಲು ಬಡಿದ ಪರಿಣಾಮ ಐದು ಹಸುಗಳು ಸಾವನ್ನಪ್ಪಿವೆ. ಕಲ್ಲಕೊಪ್ಪದ ಗ್ರಾಮದ ಫಕ್ಕಿರಗೌಡ ಕಡಬಗೇರಿ ಅವರ ಐದು ಹಸುಗಳು ಸಿಡಿಲಿಗೆ ಬಲಿಯಾಗಿವೆ.