ಸಿಂಧನೂರು ತಾಲೂಕಿನ ಗೋನವಾರ ಗ್ರಾಮದಲ್ಲಿ ಶುಕ್ರವಾರ ಸಾಮೂಹಿಕ ವಿವಾಹ ಜುಗಿತು. 
ಜಿಲ್ಲೆ

ದಾಂಪತ್ಯಕ್ಕೆ ಕಾಲಿಟ್ಟ ಐದು ಜೋಡಿಗಳು

ನರೇಶ್ ಕುಮಾರ್

ಸಿಂಧನೂರು: ತಾಲೂಕಿನ ಗೋನವಾರ ಗ್ರಾಮದ ಶ್ರೀ ಮಹಾಂಕಾಳಿ, ಮಹಾಲಕ್ಷ್ಮೀ, ಮಹಾಸರಸ್ವತಿ ಲೋಕ ಕಲ್ಯಾಣ ದೇವಸ್ಥಾನದಲ್ಲಿ 11ನೇ ವರ್ಷದ ಜಾತ್ರೋತ್ಸವ ಪ್ರಯುಕ್ತ ಶುಕ್ರವಾರ ಐದು ಜೋಡಿಗಳ ಸಾಮೂಹಿಕ ವಿವಾಹ ಜರುಗಿತು.

ರಾಜಯೋಗಿ ಮಲ್ಲಯ್ಯ ತಾತನ ನೇತೃತ್ವದಲ್ಲಿ ಬೆಳಗ್ಗೆಯಿಂದ ವಿಶೇಷ ಪೂಜೆ ಜರುಗಿದವು. ನಂತರ ಸಂಪ್ರದಾಯನುಸಾರ ಸಾಮೂಹಿಕ ವಿವಾಹದಲ್ಲಿ ನವಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.

ಬಿಜೆಪಿ ಮುಖಂಡ ಕೆ.ಕರಿಯಪ್ಪ, ಆರ್‌ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಾದರ್ಲಿ, ಜೆ.ರಾಯಪ್ಪ ವಕೀಲ, ವೆಂಕೋಬ ನಾಯಕ, ಅರುಣಕುಮಾರ ನಾಯಕ, ಉರುಕುಂದಪ್ಪ ಮಳ್ಳಿ ಇತರರಿದ್ದರು.