ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಅಮತ ಸರೋವರ ಜಿಲ್ಲಾ ಪುರಸ್ಕಾರ ಸೇರಿದಂತೆ ಐದು ಪ್ರಶಸ್ತಿಗಳನ್ನು ರಾಹುಲ್ ಸಿಂಧೆ, ಶಿವನಗೌಡ ಪಾಟೀಲ, ರವೀಂದ್ರ ಬಂಗಾರೆಪ್ಪನವರ ಸ್ವೀಕರಿಸಿದರು. 
ಜಿಲ್ಲೆ

ಬೆಳಗಾವಿ ಜಿಲ್ಲೆಗೆ ಐದು ಪ್ರಶಸ್ತಿಗಳ ಗರಿ

ಶಂಕರ ಗೆಜ್ಜಿ

ಬೆಳಗಾವಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ 2023-24ನೇ ಸಾಲಿನಲ್ಲಿ ಅಮತ ಸರೋವರ ಜಿಲ್ಲಾ ಪುರಸ್ಕಾರ ಸೇರಿದಂತೆ ಒಟ್ಟು ಐದು ಪ್ರಶಸ್ತಿಗಳನ್ನು ಬೆಂಗಳೂರಿನ ವಸಂತ ನಗರದ ಡಾ.ಬಿ.ಆರ್. ಅಂಬೇಡ್ಕರ್ ಮೆಮೋರಿಯಲ್ ಟ್ರಸ್ಟ್ ಅಂಬೇಡ್ಕರ್ ಭವನದಲ್ಲಿ ಬುಧವಾರ ನಡೆದ ನರೇಗಾ ಹಬ್ಬ-2025 ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನೀಡಿ ಗೌರವಿಸಲಾಯಿತು.

ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹಾಗೂ ಗ್ರಾಮೀಣಾಭಿವದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆ ಅವರು ಜಿಪಂ ಸಿಇಒ ರಾಹುಲ್ ಶಿಂಧೆ, ಜಿಪಂ ಯೋಜನಾ ನಿರ್ದೇಶಕ ರವೀಂದ್ರ ಬಂಗಾರೆಪ್ಪನವರ, ಎಡಿಪಿಸಿ ಬಸವರಾಜು, ಜಿಲ್ಲಾ ಐಇಸಿ ಸಂಯೋಜಕ ಪ್ರಮೋದ ಗೋಡೆಕರ್ ಅವರಿಗೆ ಅಮತ ಸರೋವರ ಜಿಲ್ಲಾ ಪುರಸ್ಕಾರ ನೀಡಿ ಗೌರವಿಸಿದರು.

ಅದೇ ರೀತಿ ಬೆಳಗಾವಿ ಜಿಲ್ಲೆ ಕಷಿ ಮತ್ತು ಜಲಾನಯನ ಹಾಗೂ ಅರಣ್ಯ ಇಲಾಖೆಗೆ ಅತ್ಯುತ್ತಮ ಜಿಲ್ಲಾ ಒಗ್ಗೂಡಿಸುವಿಕೆ ಪುರಸ್ಕಾರವನ್ನು ಜಿಪಂ ಸಿಇಒ ರಾಹುಲ್ ಶಿಂಧೆ, ಕಷಿ ಇಲಾಖೆಯ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ಹಾಗೂ ಸಾಮಾಜಿಕ ಅರಣ್ಯ ಇಲಾಖೆ ಉಪ ಸಂರಕ್ಷಣಾಧಿಕಾರಿ ಕೆ.ಎಸ್.ಗೊರವರ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ವಲಯ ಅರಣ್ಯಾಧಿಕಾರಿ ಸ್ವೀಕರಿಸಿದರು.

ಹುಕ್ಕೇರಿ ತಾಲೂಕಿನ ಕೊಟಬಾಗಿ ಗ್ರಾಪಂಗೆ ಅತ್ಯುತ್ತಮ ಗ್ರಾಪಂ ಪುರಸ್ಕಾರವನ್ನು ತಾಪಂ ಇಒ ಟಿ.ಆರ್.ಮಲ್ನಾಡದ, ಸಹಾಯಕ ನಿರ್ದೇಶಕ (ಗ್ರಾಉ) ಲಕ್ಷ್ಮೀನಾರಾಯಣ, ಗ್ರಾಪಂ ಅಧ್ಯಕ್ಷ ಬಸವರಾಜ ಗೊಸುರಿ ಹಾಗೂ ಪಿಡಿಒ ನಿರಂಜನ ಕುರಬೇಟ ಸ್ವೀಕರಿಸಿದರು. ಉತ್ತಮ ಕಾಯಕ ಬಂಧು ಪುರಸ್ಕಾರವನ್ನು ಕಾಯಕ ಬಂಧು ಅನಿತಾ ತುಕಾರಾಮ ಬೆಳಗಾಂವಕರ್, ತಾಪಂ ಇಒ ರಮೇಶ ಹೆಡಗೆ, ತಾಲೂಕು ಐಇಸಿ ಸಂಯೋಜಕ ರಮೇಶ ಮಾದರ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಶಾಸಕರಾದ ರಿಜ್ವಾನ್ ಅರ್ಷದ್, ಶರತ್ ಬಚ್ವೇಗೌಡ, ಪಂಚಾಯತ್ ರಾಜ್ ಅಪರ ಮುಖ್ಯ ಕಾರ್ಯದರ್ಶಿ ಉಮಾ ಮಹಾದೇವನ್, ಗ್ರಾಮೀಣಾಭಿವದ್ಧಿ ಮತ್ತು ಪಂಚಾಯತ್ ರಾಜ್ ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್, ಗ್ರಾಮೀಣಾಭಿವದ್ಧಿ ಆಯುಕ್ತ ಪವನಕುಮಾರ ಮಾಲಪಾಟಿ ಮತ್ತಿತರರು ಉಪಸ್ಥಿತರಿದ್ದರು.