ಮಾದಕವಸ್ತು ಸೇವನೆ ಐವರ ಬಂಧನ 
ಜಿಲ್ಲೆ

ಮಂಗಳೂರು ಪರಿಸರದಲ್ಲಿ ಮಾದಕವಸ್ತು ಸೇವನೆ ಐವರ ಬಂಧನ

ಹರೀಶ ಎಂ.
ಮಂಗಳೂರು: ಪೊಲೀಸ್ ಕಮಿಶನರೇಟ್ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಮಾದಕವಸ್ತು ಸೇವನೆ ಮಾಡಿದ್ದ ಒಟ್ಟು 5 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ನಗರದ ಬಿಜೈ ಕೆಎಸ್‌ಆರ್‌ಟಿಸಿ ಬಳಿ ಮಾದಕವಸ್ತು ಸೇವಿಸಿದ್ದ ಕುಲಶೇಖರದ ಸಂದೀಪ್ ಡೇರೆಲ್ ಡಿಸೋಜ (29) ಎಂಬಾತನನ್ನು ಬರ್ಕೆ ಪೊಲೀಸರು ವಶಕ್ಕೆ ಪಡೆದು ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ನಡೆಸಿದಾಗ ಮಾದಕವಸ್ತು ಸೇವನೆ ಮಾಡಿರುವುದು ದೃಢಪಟ್ಟಿದೆ.
ಉಳ್ಳಾಲ ತಾಲೂಕು ಬೆಳ್ಮ ಗ್ರಾಮದ ದೇರಳಕಟ್ಟೆಯಲ್ಲಿ ಮಾದಕವಸ್ತು ಸೇವನೆಗೈದು ನಶೆಯಲ್ಲಿದ್ದ ಮುಹಾಝ್ ಎಂ. (21) ಎಂಬಾತನನ್ನು ಕೊಣಾಜೆ ಪೊಲೀಸರು ವಶಕ್ಕೆ ಪಡೆದು ವೈದ್ಯಕೀಯ ತಪಾಸಣೆ ನಡೆಸಿದಾಗ ಮಾದಕವಸ್ತು ಸೇವನೆ ಮಾಡಿರುವುದು ದೃಢಪಟ್ಟಿದೆ.
ಮಂಗಳೂರು ನಗರದ ಗ್ರೀನ್‌ಪಾರ್ಕ್ ಬಳಿ ನಶೆಯಲ್ಲಿದ್ದ ಕಕ್ಕೆಬೆಟ್ಟು ನಿವಾಸಿ ಸುಶಾನ್ ಕೆ. (35) ಎಂಬಾತನನ್ನು ಬಂದರು ಪೊಲೀಸರು ವಶಕ್ಕೆ ಪಡೆದು ವೆನ್ಲಾಕ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಿದಾಗ ಮಾದಕವಸ್ತು ಸೇವನೆ ಮಾಡಿರುವುದು ದೃಢಪಟ್ಟಿದೆ.
ಕೋಟೆಕಾರು ಬೀರಿ ಜಂಕ್ಷನ್ ಬಳಿ ಪನೀರ್‌ರೋಡ್ ನಿವಾಸಿ ಕಾಸಿಂ ಯಾನೆ ಕುಂಞಿಮೋನು (44) ಎಂಬಾತ ನಶೆಯಲ್ಲಿದ್ದು, ಆತನನ್ನು ಉಳ್ಳಾಲ ಪೊಲೀಸರು ವಶಕ್ಕೆ ಪಡೆದು ವೈದ್ಯಕೀಯ ತಪಾಸಣೆ ನಡೆಸಿದಾಗ ಮಾದಕವಸ್ತು ಸೇವನೆ ಮಾಡಿರುವುದು ದೃಢಪಟ್ಟಿದೆ.
ಕುಳಾಯಿ ಮರಿನಾ ವಾಟರ್ ಫ್ರಂಟ್‌ಗೆ ಹೋಗುವ ರಸ್ತೆಯಲ್ಲಿ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ಅರ್ಕುಳ ನಿವಾಸಿ ಮೊಹಮ್ಮದ್ ಸೈಫುಲ್ಲಾ (36) ಎಂಬಾತನನ್ನು ಸುರತ್ಕಲ್ ಪೊಲೀಸರು ವಶಕ್ಕೆ ಪಡೆದು ವೈದ್ಯಕೀಯ ತಪಾಸಣೆ ನಡೆಸಿದಾಗ ಮಾದಕವಸ್ತು ಸೇವನೆ ಮಾಡಿರುವುದು ದೃಢಪಟ್ಟಿದೆ.