ಕೊಟ್ಟೂರಿನ ಕೊಟ್ಟೂರೇಶ್ವರ ಕಾಲೇಜ್‌ನಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಕ್ರೀಡಾಕೂಟಕ್ಕೆ ಡಾ.ರವಿಕುಮಾರ್ ಚಾಲನೆ ನೀಡಿದರು. ದೈಹಿಕ ನಿರ್ದೇಶಕ ಎಚ್.ಕೊಟ್ರೇಶ, ದೈಹಿಕ ನಿರ್ದೇಶಕ ಡಾಕ್ಟರ್ ಶಿವಕುಮಾರ್, ಡಾ.ಪೃಥ್ವಿರಾಜ್.ಸಿ.ಬೆಡ್ಜರಗಿ, ಪ್ರಾಂಶುಪಾಲರಾದ ಪ್ರಶಾಂತ್ ಕುಮಾರ್.ಎಂ.ಎಚ್, ಡಾ.ಜೆ.ಬಿ.ಸಿದ್ದನಗೌಡ, ಸಿ.ಬಸವರಾಜ್, ಡಾ.ಚೇತನ್ ಚೌಹಾನ್ ಇದ್ದರು. 
ಜಿಲ್ಲೆ

ಸದೃಢ ದೇಹಕ್ಕೆ ಕ್ರೀಡೆ ಅಗತ್ಯ

Kopala - Desk - Eraveni

ಕೊಟ್ಟೂರು: ಶಿಕ್ಷಕರು ವಿದ್ಯಾರ್ಥಿಗಳಿಗೆ ಸೂಕ್ತ ತರಬೇತಿ ಮತ್ತು ಮಾರ್ಗದರ್ಶನ ನೀಡಿದರೆ ಅಸಾಧ್ಯ ಎಂಬುದನ್ನು ಸಾಧಿಸಿ ತೋರಿಸಬಲ್ಲರು ಎಂದು ಕೊಟ್ಟೂರೇಶ್ವರ ಕಾಲೇಜ್ ಪ್ರಾಚಾರ್ಯ ಡಾ.ರವಿಕುಮಾರ್ ಹೇಳಿದರು.

ಕೊಟ್ಟೂರೇಶ್ವರ ಮಹಾವಿದ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಾರ್ಷಿಕ ಕ್ರೀಡಾಕೂಟದಲ್ಲಿ ಮಾತನಾಡಿದರು.
ಮಾನವನ ದೈಹಿಕ ಮತ್ತು ಮಾನಸಿಕ ಸದೃಢತೆಗೆ ಯೋಗ ಮತ್ತು ಕ್ರೀಡೆ ಅಗತ್ಯ ಎಂದು ಕ್ರೀಡಾಪಟುಗಳಿಗೆ ಉತ್ತೇಜನ ನೀಡಿದರು.

ಕ್ರೀಡಾಪಟುಗಳಿಂದ ಕ್ರೀಡಾ ಜ್ಯೋತಿ ವೇದಿಕೆ ಮುಂಭಾಗದವರೆಗೆ ತರಲಾಯಿತು. ಪಿಯುಸಿ ಮತ್ತು ಪದವಿ ವಿದ್ಯಾರ್ಥಿಗಳಿಂದ ಏರೋಬಿಕ್ಸ್ ನೃತ್ಯ ಏರ್ಪಾಡು ಮಾಡಲಾಗಿತ್ತು. ದೈಹಿಕ ನಿರ್ದೇಶಕ ಎಚ್.ಕೊಟ್ರೇಶ, ದೈಹಿಕ ನಿರ್ದೇಶಕ ಡಾಕ್ಟರ್ ಶಿವಕುಮಾರ್, ಡಾ.ಪೃಥ್ವಿರಾಜ್.ಸಿ.ಬೆಡ್ಜರಗಿ, ಪ್ರಾಂಶುಪಾಲರಾದ ಪ್ರಶಾಂತ್ ಕುಮಾರ್.ಎಂ.ಎಚ್, ಡಾ.ಜೆ.ಬಿ.ಸಿದ್ದನಗೌಡ, ಸಿ.ಬಸವರಾಜ್, ಡಾ.ಚೇತನ್ ಚೌಹಾನ್ ಇದ್ದರು.