ಮಂಗಳೂರು : ವಾಯ್ಸ ಆಫ್ ಹೆಲ್ತ್‌ಕೇರ್ (ವಿಒಹೆಚ್) ವತಿಯಿಂದ ಇಂಡಿಯನ್ ಸ್ಟ್ರೋಕ್ ಅಸೋಸಿಯೇಷನ್ (ಐಎಸ್‌ಎ ) ಸಹಯೋಗದಲ್ಲಿ ನೀಡುವ ಬೆಸ್ಟ್ ಸ್ಟ್ರೋಕ್ ರೆಡಿ ಹಾಸ್ಪಿಟಲ್ ಆಫ್ ದಿ ಇಯರ್ ಪ್ರಶಸ್ತಿಗೆ ನಗರದ ನಗರದ ಫಸ್ಟ್ ನ್ಯೂರೋ ಬ್ರೈನ್ ಸ್ಪೈನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆಯ್ಕೆಯಾಗಿದೆ.
ಫಸ್ಟ್ ನ್ಯೂರೋ ಬ್ರೈನ್ ಸ್ಪೈನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯು ತ್ವರಿತ ಪ್ರತಿಕ್ರಿಯೆ, ಅತ್ಯಾಧುನಿಕ ಚಿಕಿತ್ಸೆ ಮತ್ತು ರೋಗಿಗಳ
ಆರೈಕೆಯಲ್ಲಿ ಗಣನೀಯ ಕೊಡುಗೆಗಾಗಿ ಈ ಪ್ರಶಸ್ತಿಗೆ ಆಯ್ಕೆಯಾಗಿದೆ. ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನವದೆಹಲಿಯ ಹಯತ್ ರೀಜೆನ್ಸಿಯಲ್ಲಿ ನಡೆದ ಸಮಾರಂಭದಲ್ಲಿ ಸಂಸ್ಥೆಯ ಬಿಸಿನೆಸ್ ಡೆವಲಪ್ಮೆಂಟ್ ಮುಖ್ಯಸ್ಥ ಪ್ರತ್ಯೂಷ್ ಶೆಟ್ಟಿ ಸ್ವೀಕರಿಸಿದರು.
ಬೆಸ್ಟ್ ಸ್ಟ್ರೋಕ್ ರೆಡಿ ಹಾಸ್ಪಿಟಲ್ ಆಫ್ ದಿ ಇಯರ್ ಪ್ರಶಸ್ತಿ ಲಭಿಸಿದ್ದು ನಮಗೆ ಅತ್ಯಂತ ಗೌರವ ಮತ್ತು ಹೆಮ್ಮೆ ಎನಿಸುತ್ತಿದೆ ಎಂದು ಆಸ್ಪತ್ರೆಯ ಮ್ಯಾನೇಜಿಂಗ್ ಡೈರೆಕ್ಟರ್ ಡಾ. ರಾಜೇಶ್ ಶೆಟ್ಟಿ ತಿಳಿಸಿದ್ದಾರೆ. ಈ ಪ್ರಶಸ್ತಿ ನಮ್ಮ ತಂಡದ ಪ್ರಾಮಾಣಿಕ ಶ್ರಮ ಮತ್ತು ನಿಷ್ಠೆಯನ್ನು ತೋರಿಸುತ್ತದೆ. ನಮ್ಮ ತಂಡ ಸ್ಟ್ರೋಕ್ ರೋಗಿಗಳಿಗೆ ಅತ್ಯುತ್ತಮ ಆರೈಕೆಯನ್ನು ಒದಗಿಸಲು ನಿರಂತರವಾಗಿ ಶ್ರಮಿಸುತ್ತಿದೆ . ಸ್ಟ್ರೋಕ್ ಚಿಕಿತ್ಸೆಯನ್ನು ಇನ್ನೂ ಹೆಚ್ಚು ಅತ್ಯಾಧುನಿಕವಾಗಿ ಅಭಿವೃದ್ಧಿಪಡಿಸಲು ಮತ್ತು ರೋಗಿಗಳಿಗೆ ಅತ್ಯುತ್ತಮ ಚಿಕಿತ್ಸೆ ಹಾಗೂ ಅದರ ಫಲಿತಾಂಶಗಳನ್ನು ನೀಡಲು ಬದ್ಧರಾಗಿದ್ದೇವೆ ಎಂದು ಅವರು ತಿಳಿಸಿದ್ದಾರೆ.