ಆಲೂರಿನಲ್ಲಿ ಶಾಸಕ ಸಿಮೆಂಟ್ ಮಂಜು ಅರ್ಹರಿಗೆ ಪರಿಕರ ವಿತರಿಸಿದರು. ಎಂ.ಎಸ್.ನಂಜುಂಡಪ್ಪ, ಶಾಂತೇಗೌಡ ಇದ್ದರು. 
ಜಿಲ್ಲೆ

ಶಾಸಕರಿಂದ ಮೀನುಗಾರಿಕೆ ಸಲಕರಣೆ ವಿತರಣೆ

ಆಲೂರು: ಮೀನುಗಾರಿಕೆ ಇಲಾಖೆ ವತಿಯಿಂದ ವಿಶೇಷ ಘಟಕ ಯೋಜನೆಯಡಿ 6 ಗಿರಿಜನರು ಹಾಗೂ ಉಪಯೋಜನೆಯಡಿ 7 ಜನ ಮತ್ತು ರಾಜ್ಯ ವಲಯದಿಂದ ನಾಲ್ವರು ಸೇರಿ ಒಟ್ಟು 17 ಫಲಾನುಭವಿಗಳಿಗೆ ಮೀನುಗಾರಿಕೆ ಸಲಕರಣೆಗಳನ್ನು ಶಾಸಕ ಸಿಮೆಂಟ್ ಮಂಜು ವಿತರಿಸಿದರು.

ನಂತರ ಮಾತನಾಡಿದ ಅವರು, ಮೀನುಗಾರರನ್ನು ಉತ್ತೇಜಿಸುವ ನಿಟ್ಟಿನಲ್ಲಿ ವಿವಿಧ ರೀತಿಯ ಸಹಾಯಧನ ಸೇರಿದಂತೆ ಪ್ರಾಣ ರಕ್ಷಣೆಗೆ ಕಿಟ್‌ಗಳು, ಮೀನು ಹಿಡಿಯುವ ಬಲೆಗಳು, ಕ್ರೇಟುಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಇದರ ಸದುಪಯೋಗವನ್ನು ಅರ್ಹರು ಪಡೆದುಕೊಳ್ಳಬೇಕು. ಮೀನುಗಾರರು ಸರ್ಕಾರದಿಂದ ನೀಡುವ ಸವಲತ್ತುಗಳನ್ನು ಬಳಸಿಕೊಂಡು ಜೀವನವನ್ನು ಉತ್ತಮಗೊಳಿಸಿಕೊಳ್ಳಬೇಕು. ಜತೆಗೆ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ಸಲಹೆ ನೀಡಿದರು.

ಮೀನುಗಾರಿಕೆ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಎಂ.ಎಸ್.ನಂಜುಂಡಪ್ಪ, ತಾಲೂಕು ಪ್ರಭಾರ ಸಹಾಯಕ ನಿರ್ದೇಶಕ ಶಾಂತೇಗೌಡ ಸೇರಿದಂತೆ ಮುಂತಾದವರು ಹಾಜರಿದ್ದರು.