ಜಿಲ್ಲೆ

ಮೀನುಗಾರಿಕೆ ಕೌಶಲ ಯೋಜನೆ ಸಿಬ್ಬಂದಿ ನೇಮಕಾತಿ

Mangaluru - Shravan Kumar Nala

ಮಂಗಳೂರು: ಮಂಗಳೂರಿನ ಮೀನುಗಾರಿಕಾ ಕಾಲೇಜಿನಲ್ಲಿ ಕೇಂದ್ರ ಸರ್ಕಾರದ ನಗರಾಭಿವೃದ್ಧಿ ಮತ್ತು ಬಡತನ ನಿವಾರಣೆ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಂಗಳೂರು ಸ್ಮಾರ್ಟ್‌ಸಿಟಿ ಲಿಮಿಟೆಡ್‌ನ ಪ್ರಾಯೋಜಿತ ಯೋಜನೆಯಾದ ಮೀನುಗಾರಿಕೆ ಕೌಶಲಾಭಿವೃದ್ಧಿ ಮತ್ತು ಸುರಕ್ಷತಾ ತರಬೇತಿ ಕೇಂದ್ರದಲ್ಲಿ ತಾತ್ಕಾಲಿಕ ಆಧಾರದ ಮೇಲೆ ಸಹ ತರಬೇತುದಾರ ಮತ್ತು ಕೇರ್ ಟೇಕರ್ ಕಂ.ಹೆಲ್ಪರ್ ನೇಮಿಸಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಆಸಕ್ತ ಅಭ್ಯರ್ಥಿಗಳು ಮಾಹಿತಿಗೆ ಕಾಲೇಜಿನ ವೆಬ್‌ಸೈಟ್ ( www.cofm.edu.in ) ಪರಿಶೀಲಿಸಬಹುದು. ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿ ಭರ್ತಿ ಮಾಡಿದ ಅರ್ಜಿಯನ್ನು ಸಹಾಯಕ ಆಡಳಿತಾಧಿಕಾರಿ, ಮೀನುಗಾರಿಕಾ ಕಾಲೇಜು, ಮಂಗಳೂರು ಇಲ್ಲಿಗೆ ಫೆ.6ರ ರೊಳಗೆ ಖುದ್ದಾಗಿ, ಅಂಚೆ ಅಥವಾ ಕೊರಿಯರ್ ಮೂಲಕ ಕಳುಹಿಸಿಕೊಡಬೇಕು. ಮಾಹಿತಿಗೆ ಡಾ.ಎ.ಟಿ.ರಾಮಚಂದ್ರ ನಾಯ್ಕ, ಸಂಯೋಜಕರು (ಮೊ: 99169 24084) ಇವರನ್ನು ಸಂಪರ್ಕಿಸಬಹುದು.