ಹಾನಗಲ್ಲ: ಮೀನು ಹಿಡಿಯಲು ಹೋದ ವೃದ್ಧರೊಬ್ಬರು ಕೆರೆಯಲ್ಲಿ ಬಿದ್ದು ಮೃತಪಟ್ಟ ಘಟನೆ ತಾಲೂಕಿನ ಅಕ್ಕಿವಳ್ಳಿ ಗ್ರಾಮದಲ್ಲಿ ನಡೆದಿದೆ.
ಗುತ್ತೆಪ್ಪ ಪುಟ್ಟಪ್ಪ ಯಳ್ಳೂರ (68) ಮೃತ ವೃದ್ಧ.
ಈತ ಹಿರೇಕೆರಿಯಲ್ಲಿ ಮೀನು ಹಿಡಿಯಲು ಎಂದು ಹೋದಾಗ ನೀರಿನಲ್ಲಿ ಮುಳಗಿ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಹಾನಗಲ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.