ಜಿಲ್ಲೆ

ಮೀನು ಹಿಡಿಯಲು ಹೋಗಿ ಮೃತಪಟ್ಟ ಯುವಕ

Haveri - Kariyappa Aralikatti

ಹಾವೇರಿ: ಕಲ್ಲಕಣಿಯಲ್ಲಿನ ನೀರಿನಲ್ಲಿ ಮೀನು ಹಿಡಿಯಲು ಹೋದ ಯುವಕನೊಬ್ಬ ನೀರಿನಲ್ಲಿ ಮುಳಗಿ ಮೃತಪಟ್ಟ ಘಟನೆ ತಾಲೂಕಿನ ದೇವಗಿರಿ ಜಿಲ್ಲಾಡಳಿತ ಭವನದ ಹಿಂಭಾಗದಲ್ಲಿ ಭಾನುವಾರ ನಡೆದಿದೆ.
ಗ್ರಾಮದ ಖಾಜಾಸಾಬ ಶಂಶುದ್ದೀನ್​ ಮಕಾನದಾರ (17) ಮೃತ ಯುವಕ.
ಈತ ಜಿಲ್ಲಾಡಳಿತ ಭವನದ ಹಿಂಭಾಗದಲ್ಲಿ ಕಲ್ಲಕಣಿಯಲ್ಲಿನ ನಿಂತಿದ್ದ ನೀರಿನ ಗುಂಡಿಯಲ್ಲಿ ಮೀನು ಹಿಡಿಯಲು ಹೋದಾಗ ಕಾಲು ಜಾರಿ ನೀರಿನಲ್ಲಿ ಬಿದ್ದು ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಗ್ರಾಮೀಣ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.