ಮಂಗಳೂರು: ಶ್ರೀನಿವಾಸ ವಿಶ್ವವಿದ್ಯಾಲಯದ ವಳಚ್ಚಿಲ್ ಪರಿಸರದಲ್ಲಿರುವ ವೈಕುಂಠದಲ್ಲಿನ ಶ್ರೀನಿವಾಸ ದೇವಸ್ಥಾನದಲ್ಲಿ ಪ್ರಥಮ ವಧರ್ಂತ್ಯೋತ್ಸವ ಸೋಮವಾರ ಭಕ್ತಿಭಾವದಿಂದ ಮತ್ತು ಅದ್ದೂರಿಯಾಗಿ ನಡೆಯಿತು.
ಪ್ರಥಮ ವಧರ್ಂತ್ಯೋತ್ಸವ ಹಿನ್ನೆಲೆಯಲ್ಲಿ ವೈದಿಕ ವಿಧಿವಿಧಾನಗಳು ಹಾಗೂ ಸಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿತು. ದಿನದ ಪ್ರಾರಂಭದಲ್ಲಿ ನಡೆದ ಭಜನೆಗಳು ದೇವಸ್ಥಾನದ ವಾತಾವರಣವನ್ನು ಭಕ್ತಿಭಾವದಿಂದ ತುಂಬಿಸಿದವು. ಇದರ ನಂತರ ಪುಣ್ಯಾಹವಚನ, ಗಣಹೋಮ, ವಿಷ್ಣು ಸಹಸ್ರನಾಮಹೋಮ ಮತ್ತು ಪಾವಮಾನ ಹೋಮ ನೆರವೇರಿತು. ಭಕ್ತರು ಸಂಕೀರ್ತನೆ ಮಾಡಿದ ವಿಷ್ಣು ಸಹಸ್ರನಾಮದ ಗಾಯನವು ಮಂದಿರದ ಆವರಣದಲ್ಲಿ ಆಧ್ಯಾತ್ಮಿಕ ಭಾವ ತುಂಬಿತು. ಭಕ್ತಿಭಾವದಿಂದ ನೆರವೇರಿದ ಪ್ರಸನ್ನ ಪೂಜೆಯ ನಂತರ ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ನೆರವೇರಿತು.
*ಸಂಸ್ಕೃತಿಕ ಕಾರ್ಯಕ್ರಮಗಳು ಪ್ರಸ್ತುತಿ
ಮಧ್ಯಾಹ್ನದ ವೇಳೆಯಲ್ಲಿ ವಿದ್ಯಾರ್ಥಿಗಳಿಂದ ಭಜನೆಗಳು ಮತ್ತು ಮನೋಹರವಾದ ಸಂಸ್ಕೃತಿಕ ಕಾರ್ಯಕ್ರಮಗಳು ಪ್ರಸ್ತುತಪಡಿಸಲ್ಪಟ್ಟವು. ಸಂಜೆ 5.30 ರಿಂದ 7.30ರ ತನಕ ಶ್ರೀನಿವಾಸ ವಿಶ್ವವಿದ್ಯಾಲಯ ಮತ್ತು ಶ್ರೀನಿವಾಸ ಸಂಸ್ಥೆಗಳ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯವರಿಂದ ಶ್ರೀನಿವಾಸ ಕಲ್ಯಾಣ ಯಕ್ಷಗಾನ ಪ್ರದರ್ಶನ ನಡೆಯಿತು. ಈ ಕಲಾತ್ಮಕ ಮತ್ತು ಭಕ್ತಿ ಮಯ ಯಕ್ಷಗಾನದ ಮೂಲಕ ಭಕ್ತರು ಶ್ರೀನಿವಾಸನ ದಿವ್ಯ ವಿವಾಹ ಮಹೋತ್ಸವವನ್ನು ಕಣ್ತುಂಬಿಕೊಳ್ಳುವ ಅವಕಾಶವನ್ನು ಪಡೆದರು.
ಸಮಾರಂಭದಲ್ಲಿ ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ಸಿಎ. ಆರ್. ರಾಘವೇಂದ್ರ ರಾವ್, ಸಹ ಕುಲಾಧಿಪತಿ ಡಾ. ಎ. ಶ್ರೀನಿವಾಸ ರಾವ್, ಟ್ರಸ್ಟಿ ಸದಸ್ಯರಾದ ಎ. ವಿಜಯಲಕ್ಷ್ಮಿ ಆರ್. ರಾವ್ ಮತ್ತು ಪ್ರೊ. ಎ. ಮಿತ್ರ ಎಸ್. ರಾವ್, ಶ್ರೀನಿವಾಸ ವಿಶ್ವವಿದ್ಯಾಲಯದ ಮೌಲ್ಯಮಾಪನ ರಿಜಿಸ್ಟ್ರಾರ್ ಡಾ.ಶ್ರೀನಿವಾಸ ಮಯ್ಯ ಡಿ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.
--------------------
ಶ್ರೀನಿವಾಸ ದೇವಸ್ಥಾನದ ವೆಬ್‌ಸೈಟ್‌ಅನಾವರಣ
ಶ್ರೀನಿವಾಸ ವಿಶ್ವವಿದ್ಯಾಲಯದ ವಳಚ್ಚಿಲ್ ಪರಿಸರದಲ್ಲಿರುವ ವೈಕುಂಠದಲ್ಲಿನ ಶ್ರೀನಿವಾಸ ದೇವಸ್ಥಾನದ ಸಮಗ್ರತೆ, ಇತಿಹಾಸ ಹಾಗೂ ಮಾಹಿತಿಯನ್ನೊಳಗೊಂಡ ವೆಬ್‌ಸೈಟ್‌ನ್ನು ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ಸಿಎ. ಆರ್. ರಾಘವೇಂದ್ರ ರಾವ್ ಈ ವೇಳೆ ಅನಾವರಣಗೊಳಿಸಿದರು. ತಿರುಮಲ ತಿರುಪತಿಯಿಂದ ಏಳು ಬೆಟ್ಟಗಳ ಮೇಲಿನಿಂದ ವಳಚ್ಚಿಲ್ ಕ್ಯಾಂಪಸ್‌ಗೆ ಶ್ರೀನಿವಾಸ ದೇವರ ಆಗಮನವು ಒಂದು ಮಹತ್ವದ ಕಾರ್ಯ. ಶ್ರೀನಿವಾಸ ಭಗವಂತ ಯಾವುದೇ ವ್ಯಕ್ತಿ ಅಥವಾ ಸಮುದಾಯದ ಅಧಿಪತಿಯಾಗಿರುವುದಿಲ್ಲ. ಶ್ರೀನಿವಾಸ ಸರ್ವರ ದೇವರು. ಅವನ ಉಪಸ್ಥಿತಿಯು ನಮ್ಮ ವಾತಾವರಣವನ್ನು ಶುದ್ಧೀಕರಿಸುವ ಶಕ್ತಿಯಾಗಿದೆ ಎಂದು ಡಾ.ಸಿಎ ಎ.ರಾಘವೇಂದ್ರ ರಾವ್ ತಿಳಿಸಿದ್ದಾರೆ.