ಮಂಗಳೂರು ಬೆಂದೂರ್‌ವೆಲ್‌ನಲ್ಲಿರುವ ಸೈಂಟ್ ತೆರೆಸಾ ಶಾಲೆಯ ಬಳಿಯ ಲೋಟಸ್ ಪ್ಯಾರಡೈಸ್ ಪ್ಲಾಜದಲ್ಲಿ ‘ಫಸ್ಟ್ ಯುರೋಲಜಿ’ ಕಿಡ್ನಿ ವೆಲ್ನೆಸ್ ಕ್ಲಿನಿಕ್ ಆರಂಭಗೊಂಡಿತು. ನಿಟ್ಟೆ ವಿವಿಯ ವೈಸ್ ಚಾನ್ಸಲರ್ ಡಾ.ಶಾಂತಾರಾಮ ಶೆಟ್ಟಿ ಉದ್ಘಾಟಿಸಿದರು. ಉದ್ಯಮಿ ಮಲ್ಲಾರ್ ಶಶಿಧರ ಶೆಟ್ಟಿ, ಉಜಿರೆ ರುಡ್‌ಸೆಟ್ ಮಾಜಿ ನಿರ್ದೇಶಕ ಎಂ.ಸುಬ್ರಾಯ ಪ್ರಭು, ಖ್ಯಾತ ವೈದ್ಯ ಡಾ.ಹಂಸರಾಜ ಆಳ್ವ, ಸರ್ಜನ್ ಡಾ.ಭಗವಾನ್, ನಿಟ್ಟೆ  ವೈಸ್‌ಡೀನ್ ಡಾ.ಜಯಪ್ರಕಾಶ್ ಶೆಟ್ಟಿ, ಎ.ಜೆ. ಆಸ್ಪತ್ರೆಯ ಮೆಡಿಕಲ್ ಡೈರೆಕ್ಟರ್ ಡಾ.ಪ್ರಶಾಂತ್ ಮಾರ್ಲ, ಹಿರಿಯ ಯುರೋಲಜಿಸ್ಟ್ ಡಾ.ಮೋಹನ್ ಸುವರ್ಣ, ಎಂ.ಸುಬ್ರಾಯ ಪ್ರಭು, ಶಾಂಭವಿ ಪ್ರಭು, ಸರೋಜ ಶೆಟ್ಟಿ ಉಪಸ್ಥಿತರಿದ್ದರು. 
ಜಿಲ್ಲೆ

‘ಫಸ್ಟ್ ಯುರೋಲಜಿ’ ಯಿಂದ ಉತ್ಕೃಷ್ಟ ಸೇವೆ: ಕಿಡ್ನಿ ವೆಲ್ನೆಸ್ ಕ್ಲಿನಿಕ್ ಉದ್ಘಾಟಿಸಿ ಡಾ.ಶಾಂತಾರಾಮ ಶೆಟ್ಟಿ ವಿಶ್ವಾಸ

Mangaluru - Prakash MC Manjeshwar

ಮಂಗಳೂರು: ಖ್ಯಾತ ತಜ್ಞ ಡಾ.ನರೇಂದ್ರ ಪೈ ಅವರ ‘ಫಸ್ಟ್ ಯುರೋಲಜಿ’ ಕಿಡ್ನಿ ವೆಲ್ನೆಸ್ ಕ್ಲಿನಿಕ್ ನಗರದ ಬೆಂದೂರ್‌ವೆಲ್‌ನಲ್ಲಿರುವ ಸೈಂಟ್ ತೆರೆಸಾ ಶಾಲೆಯ ಬಳಿಯ ಲೋಟಸ್‌ ಪ್ಯಾರಡೈಸ್ ಪ್ಲಾಜದಲ್ಲಿ ಭಾನುವಾರ ಶುಭಾರಂಭಗೊಂಡಿತು.
ಉದ್ಘಾಟನೆ ನಿರ್ವಹಿಸಿ ಮಾತನಾಡಿದ ನಿಟ್ಟೆ ವಿವಿಯ ವೈಸ್ ಚಾನ್ಸಲರ್ ಡಾ.ಶಾಂತಾರಾಮ ಶೆಟ್ಟಿ ಅವರು, ಫಸ್ಟ್ ಯುರೋಲಜಿ ಕ್ಲಿನಿಕ್ ಶುಭಾರಂಭಗೊಂಡಿದ್ದು, ಇಲ್ಲಿ ಯುರೋಲಜಿ ಸಂಬಂಧಿತ ವಿವಿಧ ರೋಗಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಮುಂದಿನ ದಿನಗಳಲ್ಲಿ ರೋಗಿಗಳಿಗೆ ಉತ್ಕೃಷ್ಟ ಸೇವೆ ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಉದ್ಯಮಿ ಮಲ್ಲಾರ್ ಶಶಿಧರ ಶೆಟ್ಟಿ ಅವರು ಮಾತನಾಡಿ, ವೈದ್ಯಕೀಯದಲ್ಲಿ ಯುರೋಲಜಿ ಒಂದು ಸಂಕೀರ್ಣ ಕ್ಷೇತ್ರವಾಗಿದ್ದು, ಚಿಕಿತ್ಸೆಗೆ ತಜ್ಞ ವೈದ್ಯರ ಅಗತ್ಯ ತುಂಬಾ ಇದೆ. ಈ ಕ್ಷೇತ್ರದಲ್ಲಿ ಯಶಸ್ಸು ಹಾಗೂ ಒಳ್ಳೆಯ ಅನುಭವ ಹೊಂದಿರುವ ಡಾ.ನರೇಂದ್ರ ಪೈ ಅವರಿಂದ ಈ ಭಾಗದ ಜನರಿಗೆ ಹೆಚ್ಚಿನ ಪ್ರಯೋಜನ ದೊರೆಯಲಿ ಎಂದು ಹಾರೈಸಿದರು.
ಉಜಿರೆ ರುಡ್‌ಸೆಟ್ ಮಾಜಿ ನಿರ್ದೇಶಕ ಎಂ.ಸುಬ್ರಾಯ ಪ್ರಭು ಅವರು ಮಾತನಾಡಿ, ‘ಫಟ್ ಯುರೋಲಜಿ’ ಯಲ್ಲಿ ಯುರೋಲಜಿ ಸಂಬಂಧಿಸಿದ ಎಲ್ಲ ಸಮಸ್ಯೆಗಳಿಗೆ ಚಿಕಿತ್ಸೆ ಹಾಗೂ ಸೂಕ್ತ ಮಾರ್ಗದರ್ಶನ ದೊರೆಯಲಿದೆ ಎಂದು ಹೇಳಿದರು.
ಖ್ಯಾತ ವೈದ್ಯ ಡಾ.ಹಂಸರಾಜ ಆಳ್ವ, ಸರ್ಜನ್ ಡಾ.ಭಗವಾನ್, ನಿಟ್ಟೆ  ವೈಸ್‌ ಡೀನ್ ಡಾ.ಜಯಪ್ರಕಾಶ್ ಶೆಟ್ಟಿ, ಎ.ಜೆ. ಆಸ್ಪತ್ರೆಯ ಮೆಡಿಕಲ್ ಡೈರೆಕ್ಟರ್ ಡಾ.ಪ್ರಶಾಂತ್ ಮಾರ್ಲ, ಹಿರಿಯ ಯುರೋಲಜಿಸ್ಟ್ ಡಾ.ಮೋಹನ್ ಸುವರ್ಣ ಅವರು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಶಾಂಭವಿ ಪ್ರಭು, ಸರೋಜ ಶೆಟ್ಟಿ ಉಪಸ್ಥಿತರಿದ್ದರು.
* ಹಲವು ಸಮಸ್ಯೆಗೆ ಚಿಕಿತ್ಸೆ
ಡಾ.ನರೇಂದ್ರ ಪೈ ಅವರು ಸೋಮವಾರದಿಂದ ಶನಿವಾರದವರೆಗೆ ಸಂಜೆ 5 ಗಂಟೆಯಿಂದ 8 ಗಂಟೆಯವರೆಗೆ ಫಸ್ಟ್ ಯುರೋಲಜಿ ಕ್ಲಿನಿಕ್‌ನಲ್ಲಿ ಸಮಾಲೋಚನೆಗೆ ಲಭ್ಯರಿರುತ್ತಾರೆ. ಇಲ್ಲಿ ಕಿಡ್ನಿ ಕಲ್ಲಿನ ತೊಂದರೆ,ಫ್ರೂಸ್ಟೇಟ್ ಗ್ರಂಥಿಗೆ ಸಂಬಂಧಪಟ್ಟ ತೊಂದರೆ, ಯುರೋಲಜಿ ಕ್ಯಾನ್ಸರ್, ಮೂತ್ರಪಿಂಡದ ಕಾಯಿಲೆಗಳಿಗೆ ಚಿಕಿತ್ಸೆ ಲಭ್ಯವಿದೆ.
ಡಾ.ನರೇಂದ್ರ ಪೈ ಅವರು ಯುರೋಲಜಿ ವಿಭಾಗದಲ್ಲಿ ರಾಜ್ಯದಲ್ಲಿ ಮೊದಲನೇ ಸ್ಥಾನಗಳಿಸಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ. 2018 ರಲ್ಲಿ ಆ್ಯಮ್ ಮೋದಿ ಅಕಾಡೆಮಿಕ್ ಎಕ್ಸಲೆನ್ಸ್ ಅವಾರ್ಡ್‌ಗೆ ಪಾತ್ರರಾಗಿದ್ದಾರೆ. ಪ್ರಸ್ತುತ ಕೆಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಯುರೋಲಜಿ ವಿಭಾಗದ ಸಹಾಯಕ ಪ್ರೊಫೆಸರ್ ಆಗಿ ಕಳೆದ ಆರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.