ಜಿಲ್ಲೆ

ತರೀಕೆರೆಯಲ್ಲಿ ಮೊದಲ ಮಳೆಯ ಸಿಂಚನ

ಜಿ.ಹೆಚ್. ಧನ್ಯಕುಮಾರ್

ತರೀಕೆರೆ: ಪಟ್ಟಣ ಸೇರಿ ತಾಲೂಕಿನ ವಿವಿಧೆಡೆ ವರ್ಷದ ಮೊದಲ ಮಳೆಯ ಸಿಂಚನವಾಯಿತು. ಲಕ್ಕವಳ್ಳಿ ಕ್ರಾಸ್, ಸೀತಾಪುರ ಕಾವಲು, ಕಟ್ಟೆಹೊಳೆ, ಪಿರಮೇನಹಳ್ಳಿ, ಬೇಲೇನಹಳ್ಳಿ, ತಿಮ್ಮಾಪುರ, ಹುರಳಿಹಳ್ಳಿ, ಹಿರೇಕಾತೂರು, ಬೇಲೇನಹಳ್ಳಿ ತಾಂಡ ಸೇರಿ ಮತ್ತಿತರ ಕಡೆ ಮಧ್ಯಾಹ್ನ 3.15ಕ್ಕೆ ಗುಡುಗು ಸಹಿತ ಆರಂಭವಾದ ವರ್ಷಧಾರೆ 40 ನಿಮಿಷಕ್ಕೂ ಹೆಚ್ಚು ಸಮಯ ಸುರಿಯಿತು.

ಪಟ್ಟಣದಲ್ಲಿ ಸುಮಾರು 4 ಗಂಟೆಗೆ ಆರಂಭದ ಮಳೆ ಒಂದಿಷ್ಟು ಹೊತ್ತು ಸುರಿದು ಮಾಯವಾಯಿತು. ಒಟ್ಟಾರೆ ಬೇಸಿಗೆ ಧಗೆಗೆ ಬಸವಳಿದಿದ್ದ ಜನರು ಹಾಗೂ ರೈತರಲ್ಲಿ ವರ್ಷದ ಮೊದಲ ಮಳೆಯ ಆಗಮನ ಉತ್ಸಾಹ ಮೂಡಿಸಿದೆ.