ಜಿಲ್ಲೆ

ಸಿಂಚನಾಗೆ ಪ್ರಥಮ ಸ್ಥಾನ : ಅಡೂರು ಬಾಲಕೃಷ್ಣ ತಂತ್ರಿ ಕವನ ಸ್ಪರ್ಧೆ

ಸೌಮ್ಯ ಆರ್

ಮುಳ್ಳೇರಿಯ: ಅಡೂರಿನ ಶಿವಗಿರಿ ಸಾಹಿತ್ಯ ವೇದಿಕೆಯ ಆಶ್ರಯದಲ್ಲಿ, ಬಾಲಕೃಷ್ಣ ತಂತ್ರಿ ಸ್ಮರಣಾರ್ಥ ಸ್ವಾತಂತ್ರೋತ್ಸವ ನಿಮಿತ್ತ, ಕಾಸರಗೋಡು ಜಿಲ್ಲೆಯ ಕನ್ನಡ ಪ್ರೌಢಶಾಲಾ ವಿಭಾಗದ ಕನ್ನಡ ಕವನ ರಚನಾ ಸ್ಪರ್ಧೆಯಲ್ಲಿ ಮುಳ್ಳೇರಿಯದ ಜಿ.ವಿ.ಎಚ್.ಎಸ್. ಶಾಲೆಯ ವಿದ್ಯಾರ್ಥಿನಿ ಸಿಂಚನಾ ಎ. ಪ್ರಥಮ ಸ್ಥಾನ ಪಡೆದಿದ್ದಾರೆ.

ಬದಿಯಡ್ಕ ಶ್ರೀ ಭಾರತಿ ವಿದ್ಯಾಪೀಠದ ಕವನಾ ದ್ವಿತೀಯ ಸ್ಥಾನ, ಕಾರಡ್ಕ ಜಿ.ವಿ.ಎಚ್.ಎಸ್. ಶಾಲೆಯ ಕೀರ್ತನಾ ಕೆ. ತೃತೀಯ ಬಹುಮಾನ, ಪೆರಡಾಲ ನವಜೀವನ ಪ್ರೌಢಶಾಲೆಯ ಕೆ.ಕವನಾ ಪ್ರೋತ್ಸಾಹಕ ಬಹುಮಾನ ಪಡೆದಿದ್ದಾರೆ.

ಸೆ.15ರಂದು ಕಾಸರಗೋಡಿನ ಕನ್ನಡ ಭವನ ಗ್ರಂಥಾಲಯದ ಸಭಾಂಗಣದಲ್ಲಿ ನಡೆಯುವ ಕೇರಳ-ಕರ್ನಾಟಕ ಸ್ಪಂದನ ಸಿರಿ ಕೃಷಿ, ಕನ್ನಡ ಶಿಕ್ಷಣ ಮತ್ತು ಸಂಸ್ಕೃತಿ ಸಮ್ಮೇಳನದಲ್ಲಿ ಬಹುಮಾನ ವಿತರಿಸಲಾಗುವುದು ಎಂದು ಪ್ರಶಾಂತ ರಾಜ ವಿ.ತಂತ್ರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.