ಮೈಸೂರು: ಯಾದವಗಿರಿಯ ರಾಮಕೃಷ್ಣ ವಿದ್ಯಾ ಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ನಗರ ಮಟ್ಟದ 50ನೇ ವರ್ಷದ ಅಂತರ ಪ್ರೌಢಶಾಲಾ ಸಾಮಾನ್ಯ ಜ್ಞಾನ ಸ್ಪರ್ಧೆಯಲ್ಲಿ ಸದ್ವಿದ್ಯಾ ಪ್ರೌಢಶಾಲೆ ಪ್ರಥಮ ಬಹುಮಾನ ಹಾಗೂ ಪರ್ಯಾಯ ಪಾರಿತೋಷಕವನ್ನು ಪಡೆದಿದೆ.
ಶಾಲೆಯು ಸತತವಾಗಿ 18 ವರ್ಷ ಈ ಪಾರಿತೋಷಕವನ್ನು ಪಡೆದು ದಾಖಲೆ ನಿರ್ಮಿಸಿದೆ. 10ನೇ ತರಗತಿಯ ಎಂ.ಎಸ್.ರಘುನಂದನ್ ಮತ್ತು 9ನೇ ತರಗತಿಯ ಜೀವನ್ ಪ್ರಥಮ ಬಹುಮಾನ ಗಳಿಸಿದ್ದಾರೆ. ಸದ್ವಿದ್ಯಾ ಸಂಸ್ಥೆಯ ಗೌರವ ಕಾರ್ಯದರ್ಶಿ ಪ್ರೊ.ಎಂ.ಎಸ್.ಕೆ.ನರಹರಿ ಬಾಬು, ಜಂಟಿ ಕಾರ್ಯದರ್ಶಿ ಪ್ರೊ.ಕೆ.ಎಸ್.ಹಿರಿಯಣ್ಣ, ಮುಖ್ಯಶಿಕ್ಷಕ ರಾಮಚಂದ್ರ ಭಟ್ಟ, ಶೈಕ್ಷಣಿಕ ಸಲಹೆಗಾರರಾದ ಶೈಲಜಾ ಪ್ರಹ್ಲಾದ್, ಸದ್ವಿದ್ಯಾ ಹಿರಿಯ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಅನಿಲ್ ಕುಮಾರ್ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.