ಜಿಲ್ಲೆ

ನಾಟ್ಯಕಲಾ ಡ್ಯಾನ್ಸ್ ಸ್ಟುಡಿಯೋಕ್ಕೆ ಪ್ರಥಮ ಸ್ಥಾನ

ಆದರ್ಶ್. ಎಂ.ಕೆ.

ಮಡಿಕೇರಿ: ಸಕಲೇಶಪುರದಲ್ಲಿ ಇತ್ತೀಚೆಗೆ ನಡೆದ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಮಡಿಕೇರಿಯ ನಾಟ್ಯಕಲಾ ಡ್ಯಾನ್ಸ್ ಸ್ಟುಡಿಯೋ ಪ್ರಥಮ ಸ್ಥಾನಗಳಿಸಿದೆ.

ನಾಟ್ಯಕಲಾ ಡ್ಯಾನ್ಸ್ ಸ್ಟುಡಿಯೋದ ನೃತ್ಯ ಸಂಯೋಜಕ ಅಭಿಷೇಕ್ ಅವರ ನಿರ್ದೇಶನದಲ್ಲಿ ವಿದ್ಯಾರ್ಥಿಗಳಾದ ಅಭಿರಾಮ್ ಆರ್ಯ, ಮೊನಾಲಿ, ಸಾನ್ವಿಕ, ದಿಶಾ, ಆಧ್ಯಾಶ್ರೀ, ನಿಶ್ಮಿತಾ, ಲೀಶ, ಜೈಷ್ಣವ್, ವರ್ಷ, ಯಾನ ಶೆಟ್ಟಿ, ಪ್ರೇಕ್ಷ, ಶಿವ ಕುಮಾರ್, ಕೀರ್ತನ್, ತೇಜಸ್, ತಶ್ಮಿತ, ಭಾವನಾ ರೈ, ತ್ರಿಷ್ಯ, ಶ್ರವಣ್, ಅಶ್ವಧಿ, ಪ್ರಜ್ಞಾ, ಪ್ರೀತಮ್ ಹಾಗೂ ಅಮೃತ ನೃತ್ಯ ಸ್ಪರ್ಧೆಯಲ್ಲಿ ಪಾಲ್ಗೊಂಡು ಗೆಲುವು ಸಾಧಿಸಿದರು.

ಸಕಲೇಶಪುರದ ಶ್ರೀ ರಾಮದೂತ ಹಿಂದೂ ಮಹಾಗಣಪತಿ ಸಮಿತಿ ಹಾಗೂ ರೀದಮ್ ಕೀಪಜ್ ಡ್ಯಾನ್ಸ್ ಅಕಾಡೆಮಿ ವತಿಯಿಂದ ನಡೆದ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ನೂರಾರು ಸ್ಪರ್ಧಿಗಳು ಪಾಲ್ಗೊಂಡಿದ್ದರು.