ಉಡುಪಿಯ ಎಸ್‌ಎಮ್‌ಎಸ್‌ಪಿ ಸಂಸ್ಕೃತ ಕಾಲೇಜಿನ ಡಿ.ಎಸ್. ವಾಸುದೇವ ತಂತ್ರಿ ಅವರು ಭಾರತೀಯ ಗಣಿತ ಶಲಾಕಾ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದು, ಸ್ವಾಮೀಜಿಗಳಿಂದ ಪುರಸ್ಕಾರ ಪಡೆದರು.
ಗಣಿತ ಶಲಾಕಾ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನ
ಮಂಗಳೂರು: ಬಿ.ಎ. ಜ್ಯೋತಿಷ್ಯ ಅಧ್ಯಯನ ನಡೆಸುತ್ತಿರುವ ಉಡುಪಿಯ ಎಸ್‌ಎಮ್‌ಎಸ್‌ಪಿ ಸಂಸ್ಕೃತ ಕಾಲೇಜಿನ ಡಿ.ಎಸ್. ವಾಸುದೇವ ತಂತ್ರಿ ಅವರು ಭಾರತೀಯ ಗಣಿತ ಶಲಾಕಾ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
2026ರ ಮಾ.10ರಿಂದ 13ರ ವರೆಗೆ ತಮಿಳುನಾಡಿನ ಕಾಂಚೀಪುರದಲ್ಲಿ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ ನವದೆಹಲಿ ವತಿಯಿಂದ ಆಯೋಜಿಸಲ್ಪಟ್ಟ ಶಾಸ್ತ್ರ ಸ್ಪರ್ಧೆಗಳಲ್ಲಿ ಅವರು ಭಾಗವಹಿಸಿ ಪ್ರಥಮ ಸ್ಥಾನ ಗಳಿಸಿದ್ದಾರೆ.
ಅವರಿಗೆ ಸ್ವಾಮೀಜಿಯವರು ಚಿನ್ನದ ಶಲಾಕಾ, ಪದಕ, ಚಿನ್ನದ ನಾಣ್ಯ ಮತ್ತು 25 ಸಾವಿರ ರೂ. ನಗದು ಬಹುಮಾನ ನೀಡಿ ಗೌರವಿಸಿದರು. ವಾಸುದೇವ ತಂತ್ರಿ ಅವರು ಕರ್ನಾಟಕ ಸಂಗೀತದಲ್ಲಿಯೂ ಪ್ರವೀಣರಾಗಿದ್ದು, ಶಾಸ್ತ್ರೀಯ ಸಂಗೀತದಲ್ಲಿ ವಿದ್ವತ್ ಮಾಡುತ್ತಿದ್ದಾರೆ. ಅವರು ಸಂಸ್ಕೃತ ಸುಭಾಷಿತದಲ್ಲಿ ಉತ್ತಮ ಸಾಧನೆ ಮಾಡಿ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಗೌರವ ಪದಕಗಳನ್ನು ಗಳಿಸಿದ್ದರು. ದೇವಾಲಯ ತಂತ್ರ ವಿಧಾನಗಳನ್ನು ಸಹ ಕಲಿತಿದ್ದಾರೆ.
ಅವರು ಉಡುಪಿಯ ಎಸ್‌ಎಮ್‌ಎಸ್‌ಪಿ ಸಂಸ್ಕೃತ ಕಾಲೇಜಿನ ಜ್ಯೋತಿಷ್ಯ ಪ್ರಾಧ್ಯಾಪಕ ಮತ್ತು ಜ್ಯೋತಿಷಿ ಶಿವಪ್ರಸಾದ್ ತಂತ್ರಿ ಹಾಗೂ ವೈಷ್ಣವಿ ತಂತ್ರಿ ದಂಪತಿ ಪುತ್ರ.