ಜಿಲ್ಲೆ

ಪ್ರಥಮ ಯುಗಗಳ ಗೀತೆ ಆಡಿಷನ್‌ಗೆ ಚಾಲನೆ

ಹುಬ್ಬಳ್ಳಿ; ಪ್ರೇಮ್ ಜೀ ಫೌಂಡೇಷನ್, ಪಿ ಆ್ಯಂಡ್ ಮೀಡಿಯಾ ಕಮ್ಯುನಿಕೇಷನ್, ಸ್ವರ್ಣ ಗ್ರೂಪ್ ಆಫ್ ಕಂಪನಿ ಮತ್ತು ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಎಲೈಟ್ ಸಹಯೋಗದಲ್ಲಿ ಕ್ಯಾನರ್ ವಿರುದ್ಧ ಹೋರಾಡಿ ತಮ್ಮನ್ನು ತಾವೇ ಸಮರ್ಪಿಸಿಕೊಂಡ ದಿ. ಪ್ರೇಮಾ ಹೂಗಾರ ಸವಿನೆನಪಿಗಾಗಿ ಯುಗಗಳ ಗೀತೆಗಳ ಬೃಹತ್ ಧ್ವನಿ ಸ್ಪರ್ಧೆ ಆಡಿಷನ್ ನಗರದ ಲ್ಯಾಮಿಂಗ್ಟನ್ ಶಾಲೆಯಲ್ಲಿ ಸೋಮವಾರ ಏರ್ಪಾಟಾಗಿತ್ತು.

ಕನಕದಾಸ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಡಾ. ಶಾಂತಣ್ಣ ಕಡಿವಾಲ, ಶ್ರೀ ಬಸವೇಶ್ವರ ರೂರಲ್ ಎಜುಕೇಷನ್ ಮತ್ತು ಡೆವಲಪಮೆಂಟ್ ಅಧ್ಯಕ್ಷ ಡಾ. ಶರಣಪ್ಪ ಕೊಟಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಶ್ರೇಯಾ ಜನಸೇವಾ ಫೌಂಡೇಷನ್ ರಾಜ್ಯಾಧ್ಯಕ್ಷ ವಿ.ಜಿ. ಪಾಟೀಲ, ಎಲೈಟ್ ಅಧ್ಯಕ್ಷೆ ರೀತು ಸರಾಫ್, ಕಾಂಗ್ರೆಸ್ ಯುವ ಮುಖಂಡ ನಾಗರಾಜ ಕೊಟಗಿ, ಪತ್ರಕರ್ತ ಗುರುರಾಜ ಹೂಗಾರ, ಅನೀಶ ಖೋಜೆ, ವೀರು ಉಪ್ಪಿನ, ಅಬ್ಬಾಪ್ರಸಾದ ಮಲ್ಯ, ಸುನೀಲ ಯಡ್ರಾವಿ, ಹೇಮಂತ ಲಮಾಣಿ, ರಾಮಸ್ವಾಮಿ ಗಿರಿವಡ್ಡರ, ಹರೀಶ ಬೊಮ್ಮನಹಳ್ಳಿ, ರಾಜೇಶ ಜೋಶಿ, ವೀಠಲ ಪಡಸಲಗಿ, ಪ್ರಕಾಶ ಜಾಡರ, ರೇಣುಕಾ ನಾಯ್ಡು, ವಿಜಯಲಕ್ಷ್ಮೀ ಪಾಟೀಲ, ಗೋರಕನಾಥ ಟಿಳ್ಳೆ, ಪಂಡರನಾಥ ಖೋಕಡೆ ಉಪಸ್ಥಿತರಿದ್ದರು. ನೂರಾರು ಯುವ ಗಾಯಕರು ಧ್ವನಿ ಪರೀಕ್ಷೆಗೆ ಒಳಗಾದರು.