1. ನಾಡಗೀತೆಯನ್ನು ಯಾವ ರಾಗದಲ್ಲಿ? ಎಷ್ಟು ನಿಮಿಷದಲ್ಲಿ ಹಾಡಿ ಮುಗಿಸಬೇಕೆಂಬ ಬಗ್ಗೆ ಸ್ಪಷ್ಟತೆ ಮೂಡಿಲ್ಲ. ಕಳೆದ ಸಮ್ಮೇಳನದಲ್ಲಿ ಕೂಡ ಈ ಬಗ್ಗೆ ನಿರ್ಣಯವಾಗಿತ್ತು. ಆದರೆ ಈ ಬಾರಿ ಕಲಬುರಗಿ ಕಲಾವಿದರು ಕೇವಲ 2.2 ನಿಮಿಷದಲ್ಲಿ ನಾಡಗೀತೆಯನ್ನು ಪ್ರಸ್ತುತಪಡಿಸಿ ಗಮನ ಸೆಳೆದರು.
2. ಎಚ್.ಎಸ್.ವೆಂಕಟೇಶಮೂರ್ತಿ ಸ್ನಾತಕೋತ್ತರ ಶಿಕ್ಷಣ ಪಡೆಯುವಾಗ ಚಂದ್ರಶೇಖರ ಕಂಬಾರರು ಗುರುಗಳು. ಕಳೆದ ಸಮ್ಮೇಳನದಲ್ಲಿ ಕಂಬಾರರು ಅಧ್ಯಕ್ಷರು, ಹೀಗಾಗಿ ಸಂಪ್ರದಾಯದಂತೆ ಈ ಬಾರಿ ಅವರು ಪಕ್ಷದ ಧ್ವಜವನ್ನು ತಮ್ಮ ಶಿಷ್ಯ ವೆಂಕಟೇಶ ಮೂರ್ತಿಗೆ ಹಸ್ತಾಂತರಿಸಿದ್ದು ವಿಶೇಷವಾಗಿದೆ. ಜತೆ ಅಧ್ಯಕ್ಷನಾಗಲು ಅರ್ಹ ಎಂದು ಕೊಂಡಾಡಿದರು.
3. ಶೀಘ್ರವೇ ಸಂಸತ್ ನಲ್ಲಿ ಸ್ಥಾನ ಪಡೆಯುವ ಕಲಾವಿದ ಕುಂಚದಲ್ಲಿ ಅರಳಿದ ಅನುಭವಮಂಟಪದ ಚಿತ್ರ ಸಮ್ಮೇಳನಕ್ಕೆ ಆಗಮಿಸಿದವರ ಗಮನ ಸೆಳೆಯಿತು. ವೇದಿಕೆಯಲ್ಲೂ ಈ ವಿಚಾರ ಪ್ರಸ್ತಾಪವಾಯಿತು.
4. ಸಮ್ಮೇಳನ ನಡೆಯುವ ಆವರಣದಲ್ಲಿ ಅನುಮಾನಾಸ್ಪದ ವಸ್ತು ಕಂಡುಬಂದರೆ ಗಾಬರಿಗೊಳ್ಳದೇ ತಕ್ಷಣವೇ ಸಮೀಪದ ಭದ್ರತಾ ಸಿಬ್ಬಂದಿಗೆ ತಿಳಿಸಬೇಕೆಂದು ಯಾದಗಿರಿ ಪೊಲೀಸರ ತಂಡ ಎಲ್ಲ ಸ್ವಯಂಸೇವಕರಿಗೆ ಮಾರ್ಗದರ್ಶನ ಮಾಡಿದ್ದು ವಿಶೇಷವಾಗಿತ್ತು.
5. ಪ್ರಧಾನ ವೇದಿಕೆಯಲ್ಲಿ ಮೊದಲ ದಿನ 85 ಕೃತಿಗಳು ಅನಾವರಣಗೊಂಡಿತು. ಕಸಾಪ ಸೇರಿ ವಿವಿಧ ಪ್ರಕಾಶಕರು ಪ್ರಕಟಿಸಿದ ಪುಸ್ತಕಗಳನ್ನು ಸಂಸದರು, ಶಾಸಕರು ಬಿಡುಗಡೆಗೊಳಿಸಿದರು.
6. ಸಮ್ಮೇಳನಾಧ್ಯಕ್ಷರ ಕುರಿತ ಸಾಹಿತ್ಯಾಭಿನಂದನೆ ಕೃತಿ 'ಅಕ್ಕರೆ' ಬಿಡುಗಡೆಗೊಂಡಿದೆ. ಮೈಸೂರಿನ ಉಮೇಶ್ ಸಂಪಾದಿಸಿರುವ ಈ ಕೃತಿಯಲ್ಲಿ ಸಮ್ಮೇಳನಾಧ್ಯಕ್ಷರ ಆತ್ಮಕತೆಯೂ ಇದೆ.