ರಾಯಚೂರು ನಗರಸಭೆಯಿಂದ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೆ ಹೇರಿದ ಮೇಲೆ ಮೊದಲ ಬಾರಿಗೆ ಪಾಲಿಕೆ ಅಧ್ಯಕ್ಷೆ ನರಸಮ್ಮ ಮಾಡಗಿರಿ ಅವರು ಶುಕ್ರವಾರ ನಗರದ ಜಿಪಂ ಸಭಾಂಗಣದಲ್ಲಿ ೨೮.೫೮ ಕೋಟಿ ರೂ. ಉಳಿತಾಯ ಬಜೆಟ್ ಮಂಡನೆ ಮಾಡಿದರು.
೨೦೨೫-೨೬ ನೇ ಸಾಲಿಗೆ ಬಜೆಟïನಲ್ಲಿ ವಿವಿಧ ಮೂಲಗಳಿಂದ ೨೧೯.೯೩ ಕೋಟಿ ಆದಾಯ ನಿರೀಕ್ಷಿಸಲಾಗಿದ್ದು, ಖರ್ಚು ವೆಚ್ಚದ ಒಟ್ಟು ಮೊತ್ತವನ್ನು ೧೯೧.೩೫ ಕೋಟಿಗೆ ನಿಗದಿಗೊಳಿಸಲಾಗಿದೆ. ೨೮.೫೮ ಕೋಟಿ ಮೊದಲನೇ ಬಜೆಟïನಲ್ಲಿ ಉಳಿತಾಯ ತೋರಿಸಲಾಗಿದೆ.
ಮೊದಲ ಬಾರಿಗೆ ಪಾಲಿಕೆಯಿಂದ ಯಾವುದೇ ಹೆಚ್ಚುವರಿ ತೆರಿಗೆ ಇಲ್ಲದೆ, ನಗರಾಭಿವೃದ್ಧಿ ಪ್ರಾಽಕಾರದ ಹಿಂದಿನ ತೆರಿಗೆ ಸಂಗ್ರಹದ ವಸೂಲಿ ಪಡೆಯುವುದರೊಂದಿಗೆ ಬಜೆಟïನಲ್ಲಿ ೨೮ ಕೋಟಿ ಉಳಿತಾಯ ನಿರೀಕ್ಷಿಸಲಾಗಿದೆ.
ಕೇಂದ್ರದ ಮಹಾತ್ಮ ಗಾಂಽ ನಗರ ವಿಕಾಸ್ ಯೋಜನೆ ಅನುದಾನಡಿ ೨೦೦ ಕೋಟಿ ಅನುದಾನ ಬಂದಿರುವುದು ಅಭಿವೃದ್ಧಿಗೆ ಬಹುದೊಡ್ಡ ನೆರವಾಗಿದೆ. ಪಾಲಿಕೆಗೆ ಆಸ್ತಿ ತೆರಿಗೆಯ ಬಾಬತ್ತಿನಿಂದ ೨೨.೫೧ಕೋಟಿ ರೂ. ನೀರಿನ ಕರ ವಸೂಲಿ ೪.೮೦ ಕೋಟಿ ರೂ., ೧೫ನೇ ಹಣಕಾಸು ಯೋಜನೆ ಅಡಿ ೧೩ ಕೋಟಿ ರೂ. ಸೇರಿ ಒಟ್ಟು ವಿವಿಧ ಮೂಲಗಳಿಂದ ೮೯.೮೩ ಕೋಟಿ ಮಹಾನಗರ ಪಾಲಿಕೆ ಸ್ಥಳೀಯ ವಿವಿಧ ಶುಲ್ಕ ಮತ್ತು ಇತರೆ ಸಂಗ್ರಹ ನಿರೀಕ್ಷೆ ಹೊಂದಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ಅನುದಾನ ಸೇರಿದಂತೆ ಇನ್ನಿತರೆ ನೆರವಿನ ಮೊತ್ತದಲ್ಲಿ ಬಹುತೇಕ ಹಣ ನೆರಪಾವತಿ ನೌಕರರು ಹಾಗೂ ಖಾಯಂ ನೌಕರರ ವೇತನಕ್ಕೆ ಬಳಕೆಯಾಗಲಿದೆ.
ವಿದ್ಯುತ್ ಬಳಕೆಗಾಗಿ ೧೯ ಕೋಟಿ ರೂ., ಮಳೆ ಹಾಗೂ ಚರಂಡಿ ದುರಸ್ತಿಗಾಗಿ ೧. ೨೦ ಕೋಟಿ, ಹೊರಗುತ್ತಿಗೆ ವೆಚ್ಚಗಳಲ್ಲಿ ೪.೬ ಕೋಟಿ ರೂ, ವೆಚ್ಚ ನಿಗದಿ ಮಾಡಲಾಗಿದೆ.
೨೦೨೫-೨೬ ನೇ ಸಾಲಿನ ಬಜೆಟïನಲ್ಲಿ ಆರಂಭಿಕ ಶುಲ್ಕ ೫೭.೧೯ ಕೋಟಿ ಇದ್ದರೆ, ರಾಜಸತ್ವ ಜಮೆ ೮೯.೮೩ ಕೋಟಿ, ಬಂಡವಾಳ ಜಮೆ ೪೫.೩೦ ಕೋಟಿ, ಅಸಾಮಾನ್ಯ ಜಮೆ ೨೭.೬೧ ಕೋಟಿ ಸೇರಿ ಒಟ್ಟು ೨೧೯.೯೩ ಕೋಟಿ ರೂ ನಿರೀಕ್ಷಿಸಲಾಗಿದೆ.
ನಂತರ ಸಭೆಯಲ್ಲಿ ಸದಸ್ಯ ಈ.ಶಶಿರಾಜ ಮಾತನಾಡಿ, ೧೫ನೇ ಹಣಕಾಸು ಯೋಜನೆ ಅಡಿಯ ೧೩ ಕೋಟಿ ರೂಪಾಯಿಗೆ ರಾಜ್ಯ ಸರ್ಕಾರದಿಂದ ಅನುಮೋದನೆ ದೊರೆತಿದೆ. ಆದರೆ, ಇಲ್ಲಿವರೆಗೂ ಅನುದಾನ ಬಿಡುಗಡೆಗೊಂಡಿಲ್ಲ. ಈ ಮೊತ್ತ ಬಜೆಟïನಲ್ಲಿ ಮಂಡಿಸಿದ್ದ ಆಕ್ಷೇಪ ವ್ಯಕ್ತಪಡಿಸಿದರು.
ಪಾಲಿಕೆ ಆಯುಕ್ತ ಜುಬಿನ್ ಮೊಹಪಾತ್ರ ಉತ್ತರಿಸಿ ಬಜೆಟï ಮಂಡನೆಯಲ್ಲಿ ಸರ್ಕಾರದಿಂದ ಅನುಮೋದನೆ ದೊರೆತ ಮೊತ್ತ ಮಂಡಿಸಲಾಗುತ್ತದೆ. ಇದು ಒಂದು ವರ್ಷದ ಅವಽಗೆ ರೂಪಿಸಿದ ಬಜೆಟï ಆಗಿದೆಮದರು.
ಸದಸ್ಯರಾದ ಜಯಣ್ಣ ಮಾತನಾಡಿ, ಬಜೆಟï ಮಂಡನೆ ಬಗ್ಗೆ ಜನರ ನಿರೀಕ್ಷೆ ತೀವ್ರವಾಗಿದೆ. ಮಹಾನಗರ ಪಾಲಿಕೆ ಆದ ನಂತರ ಜನ ಹೆಚ್ಚಿನ ಅಭಿವೃದ್ಧಿ ಕಾರ್ಯಗಳು ನಡೆಯುತ್ತವೆ ಎಂದು ಕಾಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪಾಲಿಕೆ ಹೊಸ ಯೋಜನೆಗಳ ಮೂಲಕ ಜನರ ಭರವಸೆಯನ್ನು ಈಡೇರಿಸುವ ಅಗತ್ಯವಿದೆ.
ವಾಹನಗಳ ಸಂಚಾರ
ತೀವ್ರವಾಗಿದೆ ಯಾವುದೇ ರಸ್ತೆಗೆ ಹೋದರು, ಸಂಚಾರ ಸಮಸ್ಯೆ ಸಾರ್ವಜನಿಕರನ್ನು ಕಾಡುತ್ತಿದೆ. ಈ ಸಮಸ್ಯೆಗೆ ಸೂಕ್ತ ಪರಿಹಾರ ಒದಗಿಸುವುದು ಅಗತ್ಯವಾಗಿದೆ ಬೀದಿ ವ್ಯಾಪಾರಿಗಳಿಗೆ ಪರ್ಯಾಯ ಸ್ಥಳ ಗುರುತಿಸಿ ವ್ಯವಹಾರ ನಡೆಸಲು ಅನುಕೂಲ ಮಾಡಿಕೊಡಬೇಕಾಗಿದೆ ಎಂದರು.
ಬಾಕ್ಸ್
ನಗರಸಭೆಯಿAದ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೆ ಹೇರಿದ ಮೇಲೆ ಮೊದಲ ಬಾರಿಗೆ ಪಾಲಿಕೆ ಅಧ್ಯಕ್ಷೆ ನರಸಮ್ಮ ಮಾಡಗಿರಿ ಮಂಡನೆ ಮಾಡುತ್ತಿರುವ ಬಜೆಟ್‌ನಲ್ಲಿ ಬಹುತೇಕ ಸದಸ್ಯರು ಗೈರಾಗಿದ್ದರಿಂದ ಬಹುತೇಕ ಕುರ್ಚಿಗಳು ಖಾಲಿ ಇದ್ದಿದ್ದು ಕಂಡುಬAದುತ್ತು, ರಂಜಾನ್ ಹಾಗೂ ಯುಗಾದಿ ಇರುವುದರಿಂದ ಬಜೆಟ್ ಮುಂದುಡಲು ಕಾಂಗ್ರೆಸ್ ಸದಸ್ಯರು ಮನವಿ ಮಾಡಿದರು. ಆದರೆ ಕೋರಂಗೆ ಇರುವ ಸದಸ್ಯರು ಬಂದಿರುವುದರಿAದ ಯಾವುದೇ ಕಾರಣಕ್ಕೆ ಬಜೆಟ್ ಮುಂದುಡುವುದಿಲ್ಲವೆAದು ಆಯಕ್ತ ಜುಬೆನ್ ಮೊಹಪಾತ್ರ ಖಡಕ್ಕಾಗಿ ಹೇಳಿದರು.
ಈ ಸಂದರ್ಭದಲ್ಲಿ ಪಾಲಿಕೆ ಉಪಾಧ್ಯಕ್ಷ ಸಾಜೀದ್ ಸಮೀರ್,ಸದಸ್ಯರಾದ ಶ್ರೀನಿವಾಸ ರೆಡ್ಡಿ,ನಾಗರಾಜ,ಎನ್.ಕೆ.ನಾಗರಾಜ,ದರೂರ್ ಬಸವರಾಜ,ಸಣ್ಣ ನರಸಪ್ಪ , ಅಕೋಂಟ್ ಅಫೀಸರ್ ದೇವೆಂದ್ರಪ್ಪ ಸೇರಿ ಅನೇಕರು ಇದ್ದರು.