ಜಿಲ್ಲೆ

ಪ್ರಥಮ ಚಿಕಿತ್ಸಾ ಮಾಹಿತಿ ಕಾರ್ಯಕ್ರಮ

ಸೌಮ್ಯ ಆರ್

ಸುಳ್ಯ: ರೋಟರಿ ಕ್ಲಬ್ ಸುಳ್ಯ ವತಿಯಿಂದ, ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಕೊಡಿಯಾಲಬೈಲ್‌ನಲ್ಲಿ ಪ್ರಥಮ ಚಿಕಿತ್ಸಾ ಮಾಹಿತಿ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ಹೃದಯ ಸ್ತಂಭನದ ಪ್ರಥಮ ಚಿಕಿತ್ಸೆ ಬಗ್ಗೆ ಮಾಹಿತಿ ನೀಡಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಜೀವರಕ್ಷಕ ಸೀನಿಯರ್ ತರಬೇತುದಾರ ಹಾಗೂ ಕೆವಿಜಿ ಮೆಡಿಕಲ್ ಕಾಲೇಜಿನ ಡಾ.ಭರತ್ ಶೆಟ್ಟಿ ತರಬೇತಿ ನೀಡಿದರು. ಸಹತರಬೇತುದಾರರಾಗಿ ಡಾ.ಪೃಥ್ವಿಕ್ ಮತ್ತು ಡಾ.ಯುವರಾಜ್ ಸಹಕರಿಸಿದರು.

ರೋಟರಿ ಕ್ಲಬ್ ಅಧ್ಯಕ್ಷೆ ಯೋಗಿತಾ ಗೋಪಿನಾಥ್ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಕ್ಲಬ್ ಜೋನ್ ಐದರ ಲೆಫ್ಟಿನೆಂಟ್ ಪ್ರಭಾಕರನ್ ನಾಯರ್ ಶುಭ ಹಾರೈಸಿದರು. ಕ್ಲಬ್‌ನ ಖಜಾಂಚಿ ಹರಿರಾಯ ಕಾಮತ್ ಉಪಸ್ಥಿತರಿದ್ದರು.

ಐಕ್ಯುಎಸಿ ಕೋರ್ಡಿನೇಟರ್ ಡಾ.ಜಯಶ್ರೀ ಹಾಗೂ ವೈಆರ್‌ಸಿ ಪ್ರೋಗ್ರಾಂ ಆಫೀಸರ್ ಉದಯಶಂಕರ್ ಎಚ್. ಮತ್ತು ವೈಆರ್‌ಸಿ ಪ್ರೋಗ್ರಾಂ ಅಸಿಸ್ಟೆಂಟ್ ಆಫೀಸರ್ ಸುರೇಖಾ ಎಚ್. ಶುಭ ಹಾರೈಸಿದರು. ಯುವ ರೆಡ್‌ಕ್ರಾಸ್ ಸದಸ್ಯರಾದ ನವ್ಯಶ್ರೀ ಪ್ರಾರ್ಥಿಸಿದರು. ಲೀಲಾವತಿ ಸ್ವಾಗತಿಸಿದರು. ಪ್ರಶಾಂತ್ ಕೆ. ವಂದಿಸಿದರು. ಯುವರಾಜ್ ಬಿ.ಎಸ್ ಕಾರ್ಯಕ್ರಮ ನಿರೂಪಿಸಿದರು.