ಜಿಲ್ಲೆ

ಎಲ್‌ಇಎ ಐಟಿಐನಲ್ಲಿ ಪ್ರಥಮ ಚಿಕಿತ್ಸೆ ಪ್ರಾತ್ಯಕ್ಷಿಕೆ

ವಿಜಯವಾಣಿ ಸುದ್ದಿಜಾಲ ಧಾರವಾಡ

ನಗರದ ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆ, ರೆಡ್‌ಕ್ರಾಸ್ ಸಂಸ್ಥೆ ಮತ್ತು ಇನ್ನರ್‌ವ್ಹೀಲ್ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಯ ಅವ್ವಪ್ಪಣ್ಣ ಅತ್ತಿಗೇರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಪ್ರೌಢ ಮತ್ತು ಪ್ರಾಥಮಿಕ ಶಾಲೆಯ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗೆ ಗುರುವಾರ ಪ್ರಥಮ ಚಿಕಿತ್ಸೆ ಕುರಿತು ಪ್ರಾತ್ಯಕ್ಷಿಕೆ ಏರ್ಪಡಿಸಲಾಗಿತ್ತು.

ಡಾ. ಉಮೇಶ ಹಳ್ಳಿಕೇರಿ ಮಾತನಾಡಿ, ಹೃದಯಾಘಾತ ಅಥವಾ ಮೂರ್ಛೆ ಹೋದ ಸಂಧರ್ಭದಲ್ಲಿ ನೀಡಬೇಕಾದ ಚಿಕಿತ್ಸೆ, ಆಸ್ಪತ್ರೆಗೆ ಸಾಗಿಸುವ ಬಗೆಯನ್ನು ವಿವರಿಸಿದರು.

ರೆಡ್‌ಕ್ರಾಸ್ ಸಂಸ್ಥೆಯ ಮುಖ್ಯಸ್ಥ ಡಾ. ಮಾಂತೇಶ ವೀರಾಪುರ ಮಾತನಾಡಿ, ಪ್ರತಿಯೊಂದು ವಿದ್ಯಾಸಂಸ್ಥೆಗಳಲ್ಲಿ ಪ್ರಥಮ ಚಿಕಿತ್ಸೆಯ ಕಿಟ್‌ಗಳನ್ನು ಇಡಬೇಕು. ಮಕ್ಕಳಿಗೆ ಗಾಯವಾದಾಗ ನೀಡುವ ಚಿಕಿತ್ಸೆಯ ಬಗೆಯನ್ನು ತಿಳಿಸಿದರು.

ಡಾ. ಕವಿತಾ ಕೋರಿ ಮಾತನಾಡಿ, ಸರ್ಕಾರಿ ಆಸ್ಪತ್ರೆಗಳು ಸಕಲ ಸೌಲಭ್ಯಗಳನ್ನು ಹೊಂದಿದ್ದು, ಅವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಸುಮ0ಗಲಾ ಹಿರೇಮಠ ಮಾತನಾಡಿ ಇನ್ನರ್ ವ್ಹೀಲ್ ಕ್ಲಬ್‌ನ ಕಾರ್ಯಚಟುವಟಿಕೆಗಳನ್ನು ವಿವರಿಸಿದರು. ರೇಖಾ ಬಾಡಗಿ ಸರ್ಕಾರದ ವೈದ್ಯಕೀಯ ಸೌಲಭ್ಯ ಮತ್ತು ಅಂಗಾ0ಗ ದಾನದಿಂದ ಆಗುವ ಉಪಯೋಗಗಳನ್ನು ತಿಳಿಸಿದರು. ಕಚೇರಿ ಅಧೀಕ್ಷಕ ಶಿವಲಿಂಗ ನೀಲಗುಂದ ಸ್ವಾಗತಿಸಿದರು. ಡಾ. ಶಿ.ಗು. ಹಿರೇಮಠ ಪರಿಚಯಿಸಿದರು.

ಭುವನೇಶ್ವರಿ ದಂಡಿನ, ಎಸ್.ಎನ್. ಪಾಟೀಲ, ಮಂಜುಳಾ ಭಾವಿಹಾಳ, ಅನುಶ್ರೀ ಚವಲಗಿ, ಡಿ.ಬಿ. ಹೊಂಬಳ, ಮಹಾಂತೇಶ ಕ್ವಾಟಿ, ರಾಘವೇಂದ್ರ ಗುಡೆನ್ನವರ, ಯಶೋಧಾ ಅಂಗಡಿ, ಡಾ. ಕವಿತಾ ಕೋರಿ, ಮೃತ್ಯುಂಜಯ ಅಮರಗೋಳ, ಮಾದೇವ ಅಗಡಿ, ನಿಂಗವ್ವ ಹೆಬ್ಬಳ್ಳಿ, ಪೂಜಾ ಸಪಾಟೆ, ಅರ್ಚನಾ ಹಿರೇಮಠ, ಲಕ್ಷ್ಮೀ ವಾಕೋಡೆ, ಗೌರಮ್ಮ ಅಮರಗೋಳ, ದಾನೇಶ್ವರಿ ಕಂಬಾರ, ಇತರರಿದ್ದರು.