ಸಿರವಾರ: ಪಪಂ ಕಚೇರಿ ಹಾಗೂ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಚನ್ನಮ್ಮ ಭಾವಚಿತ್ರಕ್ಕೆ ಪೂಜೆಸಲ್ಲಿ ಮಾಲಾರ್ಪಣೆ ಮಾಡುವ ಮೂಲಕ ಬುಧವಾರ ಜಯಂತಿ ಆಚರಣೆ ಮಾಡಲಾಯಿತು.
ಕಿತ್ತೂರು ರಾಣಿ ಚನ್ನಮ್ಮ ವೃತ್ತದ ನಾಮಫಲಕಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಸಿರವಾರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎನ್.ಉದಯ ಕುಮಾರ ಸಾಹುಕಾರ್, ಸ್ವಾತಂತ್ರ್ಯ ಹೋರಾಟದ ಮೊದಲ ಮಹಿಳಾ ಹೋರಾಟಗಾರ್ತಿ ಕಿತ್ತೂರು ರಾಣಿ ಚನ್ನಮ್ಮ ಅವರ ಶೌರ್ಯ ಸಾಹಸ, ದೇಶಪ್ರೇಮವನ್ನು ಇಂದಿನ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ ಎಂದರು.
ಪಪಂ ಕಚೇರಿಯಲ್ಲಿ ಅಧ್ಯಕ್ಷ ವೈ.ಭೂಪನಗೌಡ ಕಿತ್ತೂರು ರಾಣಿ ಚನ್ನಮ್ಮಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.
ಪ್ರಮುಖರಾದ ವೀರನಗೌಡ, ಶ್ರೀಧರ ಸ್ವಾಮಿ, ಎಚ್.ಕೆ.ಶಿವಗೇನಿ, ಆದೇಶ ಸಾಹುಕಾರ ಗೋರ್ಕಲ್, ಚಂದ್ರು ಸಾಹುಕಾರ ನೀಲಗಲ್, ಮಂಜುನಾಥ ಸಾಹುಕಾರ ಅರಕೇರಾ, ಪ್ರೇಮ್ ಕುಮಾರ್, ಎಚ್.ಕೆ.ಶಿವಗೇನಿ, ತಾಯಣ್ಣ ನೀಲಗಲ್, ಮಲ್ಲಪ್ಪ ದೊಡ್ಮನೆ, ಗ್ಯಾನಪ್ಪ ಸೂಜಪ್ಪ, ವಿನಯಕುಮಾರ್, ನಾಗರಾಜ, ಬಂದೇನವಾಜ ಇತರರಿದ್ದರು.