ತಾಳಿಕೋಟೆ: ತಾಲೂಕಿನ ಗೊಟಖಂಡ್ಕಿ ಗ್ರಾಮದ ರೆತ ದೇವಣ್ಣ ಕವಡಿಮಟ್ಟಿ ಅವರಿಗೆ ಸೇರಿದ ಜೋಡೆತ್ತುಗಳು ಕಾದಾಡುತ್ತಾ ಅವರ ಹೊಲದಲ್ಲಿದ್ದ ಹಾಳು ಬಾವಿಯಲ್ಲಿ ಬಿದ್ದಿದ್ದು ಅವುಗಳನ್ನು ಅಗ್ನಿಶಾಮಕ ಠಾಣಾ ಸಿಬ್ಬಂದಿ ಹೊರ ತೆಗೆಯುವುದರಲ್ಲಿ ಯಶಸ್ವಿಯಾಗಿದ್ದಾರೆ.
ಶುಕ್ರವಾರ ತನ್ನ ಜಮೀನಿನಲ್ಲಿ ಹರಗುವ ಕೆಲಸಕ್ಕೆಂದು ಎರಡು ಎತ್ತುಗಳನ್ನು ತೆಗೆದುಕೊಂಡು ಹೋಗಿದ್ದ ಜಮೀನಿನ ಮಾಲೀಕ ದೇವಣ್ಣ ಕವಡಿಮಟ್ಟಿ ಜಮೀನಿನ ಬದುವಿನಲ್ಲಿ ಮೇಯಲು ಬಿಟ್ಟಾಗ ಏಕಾಏಕಿ ಕಾದಾಡುತ್ತಾ ಜಮೀನಿನಲ್ಲಿದ್ದ ನೀರಿಲ್ಲದ ಹಾಳ ಬಾವಿಯೊಳಗೆ ಬಿದ್ದಿವೆ.
ಇದನ್ನು ಗಮನಿಸಿದ ಮಾಲೀಕ ದೇವಣ್ಣ ಸ್ನೇಹಿತರ ಮೂಲಕ ಅಗ್ನಿ ಶಾಮಕ ಠಾಣೆಗೆ ಸಂಪರ್ಕಿಸಿದಾಗ ಧಾವಿಸಿದ ಸಿಬ್ಬಂದಿ ಎರಡು ಎತ್ತುಗಳನ್ನು ಹಗ್ಗ ಮತ್ತು ಪೆಪಿನ ಸಹಾಯದ ಮೂಲಕ ಹೊರಗಡೆ ತೆಗೆದಿದ್ದಾರೆ. ಆದರೆ ಅದರಲ್ಲಿಯ ಒಂದು ಎತ್ತು ಬಾವಿಯಲ್ಲಿ ಮತಪಟ್ಟಿದ್ದು, ಇನ್ನೊಂದು ಎತ್ತು ಸುರತವಾಗಿದ್ದು ಪಶು ವೆದ್ಯರಿಂದ ಚಿಕಿತ್ಸೆ ಕೊಡಿಸಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣೆ ಪ್ರಭಾರಿ ಅಧಿಕಾರಿ ಪ್ರಭು ಸಣ್ಣಕ್ಕಿ, ವಾಹನ ಚಾಲಕ ವಿರೇಶ ಹಂಡ್ರಗಲ್ಲ, ಹಣಮಂತ್ರಾಯ ಕರಕಳ್ಳಿ, ಸಂತೋಷ ಲಮಾಣೆ, ಸಿಬ್ಬಂದಿಗಳು ಭಾಗವಹಿಸಿದ್ದರು.