ಜಿಲ್ಲೆ

ಕೈಗಾರಿಕಾ ಪ್ರದೇಶದಲ್ಲಿ ಭಾರೀ ಅನಾಹುತ ತಪ್ಪಿಸಿದ ಅಗ್ನಿಶಾಮಕ ಸಿಬ್ಬಂದಿ

ಹಾರೋಹಳ್ಳಿ (ರಾಮನಗರ)

ಹಾರೋಹಳ್ಳಿ ಕೈಗಾರಿಕಾ ಪ್ರದೇಶದ ಕಾರ್ಖಾನೆಯೊಂದರಲ್ಲಿ ಗ್ಯಾಸ್ ಪೈಪ್ಲೈನ್ ಲೀಕೇಜ್ ಉಂಟಾಗಿ ಅಗ್ನಿ ಅವಘಡ ಸಂಭವಿಸಿದೆ.


ತಾಲೂಕಿನ ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಬಿಸ್ಕೆಟ್ ತಯಾರಿಸುವ ಕಾರ್ಖಾನೆ ಈಟ್ ಲೆನಿಯಲ್ಲಿ ಗುರುವಾರ ಸಂಜೆ ಅಗ್ನಿ ಅವಘಡ ಸಂಭವಿಸಿದ್ದು ಲಕ್ಷಾಂತರ ರೂ ನಷ್ಟ ಉಂಟಾಗಿದೆ.


ಕೈಗಾರಿಕೆಯ ಹೊರಗಡೆ ಗ್ಯಾಸ್ ಪೈಪ್ ಲೈನ್ ಹೋಗಿದ್ದು ಲೀಕೇಜ್ ಉಂಟಾಗಿದ್ದರಿಂದ ಕಾರ್ಖಾನೆಯ ಬಳಿ ಇರುವ ಸೆಕ್ಯೂರಿಟಿ ರೂಮ್ ಬೆಂಕಿಗೆ ಆಹುತಿಯಾಗಿದೆ.


ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ಆರಿಸಿ ಆಗಬಹುದಾದ ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ. ಸ್ಥಳಕ್ಕೆ ಹಾರೋಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.