ಜಿಲ್ಲೆ

ಪಟಾಕಿ ಅಂಗಡಿಗೆ ಬೆಂಕಿ

Mysuru - Desk - Yashavanth Kumar N

ಕಿಕ್ಕೇರಿ: ಪಟ್ಟಣದ ಅಂಗಡಿ ಬೀದಿಯಲ್ಲಿ ಪಟಾಕಿ ಮಾರಾಟ ಮಳಿಗೆಗೆ ಬೆಂಕಿ ಬಿದ್ದು ಪಟಾಕಿಗಳು ಭಸ್ಮವಾಗಿವೆ.

ಪಟಾಕಿ ಅಂಗಡಿಯಲ್ಲಿ ಸೋಮವಾರ ಸಂಜೆ ದಿಢೀರನೆ ಬೆಂಕಿ ಹೊತ್ತಿಕೊಂಡಿದ್ದು, ಆಟಂಬಾಂಬ್, ಸುರುಸುರು ಬತ್ತಿ, ರಾಕೆಟ್‌ಗಳು, ಸಣ್ಣಪುಟ್ಟ ಪಟಾಕಿಗಳು ಸಿಡಿಯಲಾರಂಭಿಸಿದವು. ಈ ವೇಳೆ ಅಂಗಡಿಗಳ ಬಳಿ ನೆರೆದಿದ್ದ ಜನರು ಗಾಬರಿಯಿಂದ ಚೆಲ್ಲಾಪಿಲ್ಲಿಯಾಗಿ ಓಡಲಾರಂಭಿಸಿದರು. ಹಲವರು ಕಾಲು ತುಳಿತಕ್ಕೆ ಒಳಗಾದರು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದರು.

‘ಪಟಾಕಿ ಮಾರಾಟ ಮಾಡಲು ಕಡ್ಡಾಯವಾಗಿ ಅನುಮತಿ ಪಡೆಯಬೇಕು ಹಾಗೂ ಸುರಕ್ಷಿತ ನಿಯಮ ಪಾಲಿಸಿ ಮೈದಾನದಲ್ಲಿ ವ್ಯಾಪಾರ ಮಾಡಬೇಕು ಎಂದು ಸೂಚಿಸಲಾಗಿತ್ತು. ಪಟಾಕಿ ಅವಘಡಕ್ಕೆ ಕಾರಣರಾದ ಹಾಗೂ ಅನುಮತಿ ಇಲ್ಲದೆ ಮಾರಾಟ ಮಾಡುತ್ತಿದ್ದ ವ್ಯಾಪಾರಿಗಳ ಮೇಲೆ ಕಾನೂನು ಕ್ರಮ ವಹಿಸಲಾಗುವುದು’ ಎಂದು ಕಿಕ್ಕೇರಿ ಠಾಣೆಯ ಇನ್ಸ್‌ಪೆಕ್ಟರ್ ರೇವತಿ ತಿಳಿಸಿದರು.