ಜಿಲ್ಲೆ

ಅಗ್ನಿಶಾಮಕ ಠಾಣೆ ಲೋಕಾರ್ಪಣೆ ಶೀಘ್ರ

ವಿವೇಕಾನಂದ ದಾಸನಕೊಪ್ಪ

ರಟ್ಟಿಹಳ್ಳಿ: ರಸ್ತೆ ಕಾಮಗಾರಿ ಮುಗಿದ ಬಳಿಕ ಅಗ್ನಿಶಾಮಕ ಠಾಣೆ ಲೋಕಾರ್ಪಣೆ ಮಾಡಲಾಗುವುದು ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.

ಪಟ್ಟಣದ ನೂತನ ಅಗ್ನಿಶಾಮಕ ಠಾಣೆಗೆ ಚಿಕ್ಕಯಡಚಿ ಗ್ರಾಮದ ಮುಖ್ಯ ರಸ್ತೆಯಿಂದ ಸುಮಾರು 88 ಮೀಟರ್ ಉದ್ದದ ಸಿ.ಸಿ. ರಸ್ತೆಯ ಕಾಮಗಾರಿಗೆ ಬುಧವಾರ ಭೂಮಿ ಪೂಜೆ ನೇರವೇರಿಸಿ ಅವರು ಮಾತನಾಡಿದರು.

ಈಗಾಗಲೇ ಲೋಕಾರ್ಪಣೆಗೆ ಸಿದ್ಧವಾಗಿರುವ ಅಗ್ನಿಶಾಮಕ ಠಾಣೆಗೆ ರಸ್ತೆ , ಒಂದು ಸಿ.ಡಿ ಮತ್ತು ರಸ್ತೆಯ ಬದಿಯಲ್ಲಿ ಗಟಾರ ಕಾಮಗಾರಿಯನ್ನು 2 ತಿಂಗಳ ಅವಧಿಯಲ್ಲಿ ಗುತ್ತಿಗೆದಾರರು ಮುಕ್ತಾಯಗೊಳಿಸುವರು. ಬಳಿಕ ಠಾಣೆ ಲೋಕಾರ್ಪಣೆ ಮಾಡಲಾಗುವುದು. ತಾಲೂಕಿನಲ್ಲಿ ಅಗ್ನಿಶಾಮಕ ಠಾಣೆಯ ಸೌಲಭ್ಯದಿಂದ ಯಾವುದೇ ಅವಘಡಗಳಿಗೆ ತುರ್ತಾಗಾಗಿ ಸೇವೆ ಪಡೆಯಲು ಅನುಕೂಲವಾಗುತ್ತದೆ. ಕ್ಷೇತ್ರದಲ್ಲಿ ಅಪೂರ್ಣವಾಗಿರುವ ಕೋಲ್ಡ್ ಸ್ಟೋರೇಜ್ ಕಟ್ಟಡಗಳ ಬಾಕಿ ಉಳಿದಿರುವ ಕೆಲಸಗಳಿಗೆ ಅನುದಾನದ ಬಗ್ಗೆ ಕೃಷಿ ಸಚಿವರೊಂದಿಗೆ ರ್ಚಚಿಸಲಾಗಿದೆ. ತುಂಗಾ ಮೇಲ್ದಂಡೆ ಕಾಲುವೆ ಬಳಿ ಸಿ.ಸಿ. ರಸ್ತೆಯ ಕಾಮಗಾರಿ ಕೈಗೊಳ್ಳಲಾಗುವುದು ಎಂದರು.

ಅಗ್ನಿಶಾಮಕ ಠಾಣೆಯ ಅಧಿಕಾರಿಗಳಾದ ನಾಗೇಶ ಎಂ.ಎನ್., ಬಂಗಾರಪ್ಪ ವೈ.ಟಿ., ಗುತ್ತಿಗೆದಾರರು ರವಿ ಪುಟ್ಟಪ್ಪಗೌಡ್ರ, ಪಂಚಾಯತ್​ರಾಜ್ ಇಂಜಿನಿಯರಿಂಗ್ ಉಪವಿಭಾಗದ ಇಂಜಿನಿಯರ್ ಬಿ. ನಂದೀಶ, ನವೀನಕುಮಾರ ಎನ್., ಪಪಂ ಮುಖ್ಯಾಧಿಕಾರಿ ಸಂತೋಷ ಚಂದ್ರಿಕೇರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಡಿ. ಬಸನಗೌಡ್ರ, ಮಲ್ಲಿಕಾರ್ಜುನ ಬುರಡೀಕಟ್ಟಿ, ಸರ್ಫರಾಜ್ ಮಾಸೂರು, ನಾಗನಗೌಡ ಕೋಣ್ತಿ, ರವೀಂದ್ರ ಮುದಿಯಪ್ಪನವರ ಇತರರು ಇದ್ದರು.