ಜಿಲ್ಲೆ

ಬೆಂಕಿ ಕಿಡಿ ಹಾರಿ 5 ಲಕ್ಷ ರೂ. ಮೌಲ್ಯದ ಕಬ್ಬು ಬೆಳೆ ಹಾನಿ

Haveri - Kariyappa Aralikatti

ಬಂಕಾಪುರ: ವಿದ್ಯುತ್ ತಂತಿಯ ಕಿಡಿ ಹಾರಿ ಹ್ತಿಕೊಂಡ ಬೆಂಕಿಯಿಂದಾಗಿ 5 ಲಕ್ಷ ರೂ. ಮೌಲ್ಯದ 200 ಟನ್ನಷ್ಟು ಕಬ್ಬಿಣ ಬೆಳೆ ಸುಟ್ಟು ಕರಕಲಾದ ಘಟನೆ ಇಲ್ಲಿಗೆ ಸಮೀಪದ ತೋರೂರ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ.

ಗ್ರಾಮದ ಗೌಸಮೋದಿನ ಶಿರಬಡಗಿ ಎಂಬುವರ ಬೆಳೆ ಸುಟ್ಟಿರುವುದು.

ಇವರ ಜಮೀನಿನಲ್ಲಿ ಹಾಯ್ದು ಹೋಗಿರುವ ವಿದ್ಯುತ್ ತಂತಿ ಒಂದಕ್ಕೊಂದು ತಾಗಿ ಬೆಂಕಿ ಕಿಡಿ ಹಾರಿ ಕಬ್ಬಿಣ ಬೆಳೆ ಮೇಲೆ ಬಿದ್ದಿದೆ. ಇದರಿಂದ ಬೆಳೆ ಸಂರ್ಪೂಣ ಸುಟ್ಟು ಹೋಗಿದೆ ಎನ್ನಲಾಗಿದೆ. ಈ ಕುರಿತು ಬಂಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.