ಜಿಲ್ಲೆ

ಬೆಂಕಿಗಾಹುತಿಯಾದ ಎಲೆಕ್ಟ್ರಾನಿಕ್​ ಅಂಗಡಿ

ಬೆಂಗಳೂರು ಗ್ರಾಮಾಂತರ ಡೆಸ್ಕ್

ವಿಜಯಪುರ: ಪಟ್ಟಣದ ಕೋಲಾರ ಮುಖ್ಯರಸ್ತೆಯಲ್ಲಿನ ಎಲೆಕ್ಟ್ರಾನಿಕ್​ ಮತ್ತು ಫರ್ನಿಚರ್​ ಅಂಗಡಿಯಲ್ಲಿ ಸಂಭವಿಸಿದ ಶಾರ್ಟ್​ ಸಕ್ಯೂರ್ಟ್​ನಿಂದ ಮೊದಲನೇ ಮಹಡಿ ಯಲ್ಲಿನ ಪೀಠೋ ಪಕರಣಗಳು ಮತ್ತು ಎಲೆಕ್ಟ್ರಾನಿಕ್​ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ಅಂಗಡಿ ನೌಕರ ಬೆಳಗ್ಗೆ 9 ಗಂಟೆಗೆ ಬಾಗಿಲು ತೆರೆದಾಗ ಬೆಂಕಿ ಕಾಣಿಸಿಕೊಂಡಿದ್ದು, ಕೂಡಲೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ದೇವನಹಳ್ಳಿ ಅಗ್ನಿಶಾಮಕ ತಂಡ ಆಗಮಿಸಿ ಬೆಂಕಿ ನಿಂದಿಸಿದರು. ಅಷ್ಟರಲ್ಲಾಗಲೇ ಅಂಗಡಿ ಆಹುತಿಯಾಗಿದೆ. ವಿಜಯಪುರ

ಠಾಣೆಯಲ್ಲಿ ದೂರು ದಾಖಲಾಗಿದೆ.