ಕಾಡ್ಗಿಚ್ಚು  
ಜಿಲ್ಲೆ

ಕುಂತೂರು ಪದವಿನಲ್ಲಿ ಅಗ್ನಿ ಅವಘಡ

ಇಂದಿರಾ ಎನ್ ಕೆ

ಕಡಬ: ಪಂಜ ಮೀಸಲು ಅರಣ್ಯ ವ್ಯಾಪ್ತಿಯ ಬಲ್ಯ ಸಮೀಪದ ಕುಂತೂರು ಪದವಿನಲ್ಲಿ ಬೆಂಕಿ ತೀವ್ರತೆಗೆ ಮರಗಳು, ಕೊಂಬೆಗಳು ಹೊತ್ತಿ ಉರಿದ ಘಟನೆ ಭಾನುವಾರ ನಡೆದಿದೆ. ಸ್ಥಳೀಯರು ಹಾಗೂ ಕೆಲವು ವಾಹನ ಸವಾರರು ಬೆಂಕಿ ನಂದಿಸಲು ವಿಫಲ ಯತ್ನ ನಡೆಸಿದರು. ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ಶಮನಗೊಳಿಸಿದರು. ಆಕಸ್ಮಿಕ ಬೆಂಕಿ ಅವಘಡಕ್ಕೆ ಕಾರಣ ಇನ್ನಷ್ಟೇ ತಿಳಿದುಬರಬೇಕಿದ್ದು, ಸ್ಥಳಕ್ಕೆ ಅರಣ್ಯಾಧಿಕಾರಿಗಳು ಆಗಮಿಸಿ ಪರಿಶೀಲಿಸಿದ್ದಾರೆ.