ಕಿಕ್ಕೇರಿ ಸಮೀಪದ ಮಾಕವಳ್ಳಿಯ ಜಯರಾಮೇಗೌಡರ ಹುಲ್ಲಿನ ಬಣವೆಯಲ್ಲಿ ಸಂಭವಿಸಿದ ಬೆಂಕಿಯನ್ನು ಅಗ್ನಿ ಶಾಮಕದಳದವರು ನಂದಿಸಿದರು. 
ಜಿಲ್ಲೆ

ಹುಲ್ಲಿನ ಬಣವೆಗೆ ಬೆಂಕಿ

ನಾಗೇಶ ಎಸ್

ಕಿಕ್ಕೇರಿ: ಮಾಕವಳ್ಳಿ ಗ್ರಾಮದ ರೈತ ಜಯರಾಮೇಗೌಡ ಅವರ ಹುಲ್ಲಿನ ಮೆದೆಗೆ ಗುರುವಾರ ಬೆಂಕಿ ಬಿದ್ದು, ಅಪಾರ ನಷ್ಟವಾಗಿದೆ.

ತಮ್ಮ ಎರಡು ಎಕರೆ ಜಮೀನಿನಲ್ಲಿ ಭತ್ತ ಬೆಳೆದಿದ್ದರು. ಭತ್ತ ಕಟಾವು ಮಾಡಿ ಸುಮಾರು 2 ಟ್ರಾೃಕ್ಟರ್ ಹುಲ್ಲನ್ನು ಮೆದೆ ಹಾಕಿದ್ದರು. ಕಿಡಿಗೇಡಿಗಳ ಕೃತ್ಯದಿಂದ ಬೆಂಕಿ ಅವಘಡ ಸಂಭವಿಸಿದೆ. ಬೆಂಕಿ ಹೊತ್ತಿಕೊಂಡು ಹುಲ್ಲಿನ ಮೆದೆಯಲ್ಲಿ ದಟ್ಟ ಹೊಗೆ ಆವರಿಸಿತು. ಕೂಡಲೇ ಅಕ್ಕಪಕ್ಕದ ನಿವಾಸಿಗಳು ಬೆಂಕಿ ನಂದಿಸಲು ಯತ್ನಿಸಿದರು. ಅಗ್ನಿ ಶಾಮಕದಳ ಸ್ಥಳಕ್ಕೆ ಆಗಮಿಸಿ ಬೆಂಕಿ ಬೇರೆಡೆ ಹರಡದಂತೆ ತಡೆದಿದ್ದಾರೆ. ಕಾರ್ಯಾಚರಣೆಯಲ್ಲಿ ಅಗ್ನಿಶಾಮಕದಳ ಠಾಣಾಧಿಕಾರಿ ಶಿವಣ್ಣ, ಸಿಬ್ಬಂದಿ ದಿನೇಶ್, ಯಮನಪ್ಪ, ಓಂಕಾರ ಪಾಟೀಲ, ಶ್ರೀಕಾಂತ ಇದ್ದರು.