ಜಿಲ್ಲೆ

ಆಕಸ್ಮಿಕ ಬೆಂಕಿಗೆ ಮರ, ಗಿಡ ಭಸ್ಮ

ಎ. ಆರ್. ರಘುರಾಮ

ಕೆ.ಆರ್.ಸಾಗರ : ಕೆ.ಆರ್.ಸಾಗರ ಪೊಲೀಸ್ ಠಾಣೆ ಹಿಂಭಾಗದ ಪ್ರದೇಶದಲ್ಲಿ ಆಕಸ್ಮಿಕ ಬೆಂಕಿಗೆ ಹಲವು ಮರ, ಗಿಡಗಳು ಭಸ್ಮವಾಗಿವೆ.

ಮಂಗಳವಾರ ಮಧ್ಯಾಹ್ನ ನಡೆದ ಬೆಂಕಿ ಆಕಸ್ಮಿಕದ ಬಗ್ಗೆ ನಾಗರಿಕರು ಅಗ್ನಿ ಶಾಮಕ ಠಾಣೆಗೆ ಸುದ್ದಿ ಮುಟ್ಟಿಸಿದರು. ಸ್ಥಳಕ್ಕೆ ಧಾವಿಸಿದ ಅಗ್ನಿ ಶಾಮಕ ಠಾಣೆ ಸಿಬ್ಬಂದಿ ಬೆಂಕಿ ಆರಿಸಿ ಹೆಚ್ಚಿನ ಹಾನಿ ತಡೆಗಟ್ಟಿದರು. ಠಾಣಾ ಹಿಂಭಾಗದ ಜಾಗದಲ್ಲಿ ಬೆಳದಿದ್ದ ತೇಗ ಹಾಗೂ ತೆಂಗಿನ ಮರ ಮರಗಳು ಬೆಂಕಿಯಿಂದ ಹಾನಿಯಾಗಿದೆ. ಈ ಸಂದರ್ಭ ಯಾವುದೇ ಜೀವ ಹಾನಿಯಾಗಿಲ್ಲ. ಎಂದು ಪೊಲೀಸರು ತಿಳಿಸಿದ್ದಾರೆ