ಜಿಲ್ಲೆ

ಮೂರು ಮನೆಗಳು ಬೆಂಕಿಗಾಹುತಿ

Gadag

ನರಗುಂದ: ಶಾರ್ಟ್ ಸರ್ಕ್ಯೂಟ್​ನಿಂದಾಗಿ ಮೂವರು ಸಹೋದರರ ಮನೆಗಳು ಸುಟ್ಟ ಘಟನೆ ತಾಲೂಕಿನ ಹುಣಸೀಕಟ್ಟಿ ಗ್ರಾಮದಲ್ಲಿ ಬುಧವಾರ ನಡೆದಿದೆ.

ಗ್ರಾಮದ ಶಿವನಗೌಡ ಗಿರಿಯಪ್ಪಗೌಡ ಫಕ್ಕೀರಗೌಡ್ರ, ಚನ್ನಪ್ಪಗೌಡ ಗಿರಿಯಪ್ಪಗೌಡ ಫಕ್ಕೀರಗೌಡ್ರ ಹಾಗೂ ಫಕೀರಗೌಡ ಗಿರಿಯಪ್ಪಗೌಡ ಫಕ್ಕೀರಗೌಡ್ರ ಎಂಬುವರ ಮನೆಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಶಿವನಗೌಡ ಅವರು ತಮ್ಮ ಮಗಳ ಮದುವೆಗೆ ಎಂದು ಕೂಡಿಟ್ಟಿದ್ದ 2.40 ಲಕ್ಷ ರೂ. ನಗದು ಸೇರಿ ಲಕ್ಷಾಂತರ ರೂ. ಮೌಲ್ಯದ ಆಭರಣ, ಆಹಾರಧಾನ್ಯ, ಗೃಹೋಪಯೋಗಿ ವಸ್ತುಗಳು ಬೆಂಕಿಗಾಹುತಿಯಾಗಿವೆ.

ಚನ್ನಪ್ಪಗೌಡರ ಹಾಗೂ ಫಕೀರಗೌಡರ ಮನೆಯಲ್ಲಿಯೂ ವಿವಿಧ ದಾಖಲೆ ಸೇರಿದಂತೆ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಹಾನಿಗೀಡಾಗಿವೆ. ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ನರಗುಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.