ಹೊಸೂರು: ಹೊಸೂರಿನ ಖಾಸಗಿ ಕಂಪನಿಗೆ ಅನಿಲ ಪೂರೈಸುವ ಪೈಪ್ಲೈನ್ ಸೋರಿಕೆಯಾಗಿ ಶುಕ್ರವಾರ ಸಂಜೆ ಸಿಪ್ಕಾಟ್ ಬಳಿ ಬೆಂಕಿ ಅವಡ ಸಂಭವಿಸಿದೆ. ಕರ್ನಾಟಕ ಗಡಿಯಲ್ಲಿರುವ ಅತ್ತಿಪಲ್ಲಿ&ಹೊಸೂರು ಮಾರ್ಗದ ಸಿಪ್ಕಾಟ್ ಪ್ರದೇಶದ ಖಾಸಗಿ ಕಂಪನಿಗೆ ಅನಿಲ ಸಾಗಿಸುವ ಪೈಪ್ಲೈನ್ ಮೂಲಕ ಶುಕ್ರವಾರ ಸಂಜೆ ಅನಿಲ ಸೋರಿಕೆಯಾಗಿದ್ದು, ಸ್ಫೋಟದ ಶಬ್ದದೊಂದಿಗೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿತು. ಕೂಡಲೇ ವಿಷಯ ತಿಳಿದ ಹೊಸೂರು ಅಗ್ನಿಶಾಮಕ ಇಲಾಖೆ ಮತ್ತು ಸಿಪ್ಕಾಟ್ ಪೊಲೀಸರು ಪೈಪ್ಗಳಲ್ಲಿ ಅನಿಲ ಪೂರೈಕೆ ತಡೆದು, ಸಂಚಾರ ಸ್ಥಗಿತಗೊಳಿಸಿ, ವಿದ್ಯುತ್ ಸಂಪರ್ಕ ಕಡಿತಗೊಳಿಸಿ, ಬೆಂಕಿಯನ್ನು ನಂದಿಸಿದರು. ಹಾನಿಯಾದ ಪೈಪ್ಲೈನ್ ಮೇಲೆ ಜೆಸಿಬಿ ಮೂಲಕ ಮಣ್ಣು ಸುರಿಯಲಾಯಿತು.