ಕೆ.ಆರ್.ಸಾಗರ ಪೊಲೀಸ್ ಠಾಣಾ ಹಿಂಭಾಗದ ಖಾಲಿ ಇರುವ ಬಯಲು ಪ್ರದೇಶದಲ್ಲಿ ಬಿಸಿಲಿಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದ್ದು ಅಗ್ನಿಶಾಮಕ ದಳದ ಸಿಬ್ಬಂದಿ ಆರಿಸುತ್ತಿರುವುದು ಇವರಿಗೆ ಠಾಣಾ ಸಿಬ್ಬಂದಿ. 
ಜಿಲ್ಲೆ

ಬೆಂಕಿಗೆ ಮರ, ಗಿಡ ಭಸ್ಮ

ರವಿಕುಮಾರ್ ಪಿ. ಕೆ

ಕೆ.ಆರ್.ಸಾಗರ: ಕೆ.ಆರ್.ಸಾಗರ ಪೊಲೀಸ್ ಠಾಣೆ ಹಿಂಭಾಗದ ಪ್ರದೇಶದಲ್ಲಿ ಬೆಂಕಿಗೆ ಹಲವು ಮರ, ಗಿಡಗಳು ಭಸ್ಮವಾಗಿವೆ.

ಮಂಗಳವಾರ ಮಧ್ಯಾಹ್ನ ನಡೆದ ಬೆಂಕಿ ಆಕಸ್ಮಿಕದ ಬಗ್ಗೆ ನಾಗರಿಕರು ಅಗ್ನಿ ಶಾಮಕ ಠಾಣೆಗೆ ಸುದ್ದಿ ಮುಟ್ಟಿಸಿದರು. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಠಾಣೆ ಸಿಬ್ಬಂದಿ ಬೆಂಕಿ ಆರಿಸಿ ಹೆಚ್ಚಿನ ಹಾನಿ ತಡೆಗಟ್ಟಿದರು. ಠಾಣಾ ಹಿಂಭಾಗದ ಜಾಗದಲ್ಲಿ ಬೆಳೆದಿದ್ದ ತೇಗ ಹಾಗೂ ತೆಂಗಿನ ಮರ ಮರಗಳು ಬೆಂಕಿಯಿಂದ ಹಾನಿಯಾಗಿದೆ. ಈ ಸಂದರ್ಭ ಯಾವುದೇ ಜೀವ ಹಾನಿಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.