ಹನೂರು: ತಾಲೂಕಿನ ಕಣ್ಣೂರು ಗ್ರಾಮದ ಜಮೀನೊಂದರಲ್ಲಿ ಬುಧವಾರ ಬೆಂಕಿ ತಗುಲಿ ಮೆಕ್ಕೆ ಜೋಳದ ಕಡ್ಡಿಯ ಮೆದೆ ಭಸ್ಮವಾಗಿದೆ.
ಗ್ರಾಮದ ಹರೀಶ್ ಅವರು ಜಾನುವಾರುಗಳ ಮೇವಿಗಾಗಿ ಜಮೀನಿನಲ್ಲಿ ಮುಸುಕಿನ ಜೋಳದ ಕಡ್ಡಿಯನ್ನು ಮೆದೆ ಹಾಕಿದ್ದರು. ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡಿದೆ. ಹರೀಶ್ ಅಗ್ನಿಶಾಮಕ ಠಾಣೆಗೆ ಮಾಹಿತಿ ತಿಳಿಸಿ ಬೆಂಕಿಯನ್ನು ನಂದಿಸಲು ಮುಂದಾಗಿದ್ದಾರೆ.
ಸಿಬ್ಬಂದಿ ಸ್ಥಳಕ್ಕಾಗಮಿಸುವಷ್ಟರಲ್ಲಿ ಮೆದೆ ಬೆಂಕಿಗೆ ಆಹುತಿಯಾಗಿತ್ತು. ಜತೆಗೆ ಸಮೀಪದಲ್ಲಿನ ತೆಂಗಿನ ಮರಗಳಿಗೂ ಬೆಂಕಿ ತಗುಲಿತ್ತು. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವುದರ ಮೂಲಕ ಮುಂದಾಗುವ ಅನಾಹುತವನ್ನು ತಪ್ಪಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಪ್ರಭಾರ ಠಾಣಾಧಿಕಾರಿ ಮಹೇಶ್, ಆನಂದ್, ಪುಟ್ಟಸ್ವಾಮಿ, ಲೋಕೇಶ್ ಹಾಗೂ ಮನೋಹರ್ ಭಾಗವಹಿಸಿದ್ದರು.