ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಟೈರ್ ಬರ್ನಿಂಗ್ ಕಾರ್ಖಾನೆಗೆ ಅಗ್ನಿ ಅವಘಡ ಸಂಭವಿಸಿದೆ.
ಭಾನುವಾರ ಸಂಜೆ ಕಾರ್ಖಾನೆಯ ಪಕ್ಕದಲ್ಲಿಯೇ ಇದ್ದ ಟ್ರಾನ್ಸ್ಫಾರ್ಮರ್ ನಲ್ಲಿ ಬೆಂಕಿ ಕಾಣಿಸಿಕೊಂಡು ಆ ಬೆಂಕಿಯಿಂದ ಕಾರ್ಖಾನೆಗೂ ಬೆಂಕಿ ಆವರಿಸಿಕೊಂಡಿದೆ ಇದರಿಂದ ಕಾರ್ಖಾನೆಯ ಬಾಯ್ಲರ್ ಸ್ಫೋಟಗೊಂಡು ಬೆಂಕಿ ಹತ್ತಿಕೊಂಡಿದೆ. ಹಾರೋಹಳ್ಳಿ ಕೈಗಾರಿಕಾ ಪ್ರದೇಶದ ಎರಡನೇ ಹಂತದಲ್ಲಿರುವ ಜುಪಿಟರ್ ಟೈರ್ ಬರ್ನಿಂಗ್ ಕಾರ್ಖಾನೆಯಲ್ಲಿ ಹಳೆಯ ಟೈರ್ ಗಳನ್ನು ಸುಟ್ಟು ಹಾಕುವ ಕಾರ್ಖಾನೆ ಇದಾಗಿದ್ದು ರಮೇಶ್ ಎಂಬುವರಿಗೆ ಸೇರಿದ ಕಾರ್ಖಾನೆಯಾಗಿದೆ.
ಬೆಂಕಿ ಹತ್ತಿಕೊಂಡ ಸಂದರ್ಭದಲ್ಲಿ ಕಾರ್ಖಾನೆ ಒಳಗಿದ್ದ ಕಾರ್ಮಿಕರು ಕೂಗಿಕೊಳ್ಳುತ್ತಿದ್ದರು ಅಷ್ಟರಲ್ಲಿ ಎಲ್ಲಾ ಕಾರ್ಮಿಕರು ಕಾರ್ಖಾನೆಯಿಂದ ಆಚೆ ಓಡಿ ಬಂದಿದ್ದಾರೆ ಎಂದು ಪ್ರತ್ಯಕ್ಷ ದೃಶ್ಯಗಳು ತಿಳಿಸಿದ್ದಾರೆ ಆದರೆ ಯಾವುದೇ ಅನಾಹುತಗಳು ಸಂಭವಿಸಿಲ್ಲ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಗಳು ಬಂದು ಬೆಂಕಿ ನಂದಿಸುವಲ್ಲಿ ನಿರತರಾಗಿದ್ದಾರೆ ಹಾರೋಹಳ್ಳಿ ಪೊಲೀಸರು ಸ್ಥಳದಲ್ಲಿ ಮೊಕ್ಕಮ್ ಹೂಡಿದ್ದಾರೆ.
ಅಕ್ಕಪಕ್ಕದ ಕಾರ್ಖಾನೆ ಮಾಲೀಕರಿಗೆ ಭಯ : ಟೈರ್ ಫ್ಯಾಕ್ಟರಿಗೆ ಬೆಂಕಿ ಬಿದ್ದಿರುವುದರಿಂದ ಅಕ್ಕ ಪಕ್ಕದ ಕಾಖಾನೆ ಮಾಲೀಕರು ತಮ್ಮ ಕಾರ್ಖಾನೆಗೂ ಬೆಂಕಿ ಬೀಳುವುದೋ ಎನ್ನುವ ಆತಂಕದಿಂದ ಭಯ ಬೀತರಾಗಿದ್ದಾರೆ.
ಸಾವಿರಾರು ಸಾರ್ವಜನಿಕರು ಹಾಗೂ ಅಕ್ಕ ಪಕ್ಕದ ಗ್ರಾಮಸ್ಥರು ಸ್ಥಳದಲ್ಲಿದ್ದು ಪೊಲೀಸರು ಅವರನ್ನು ತಡೆಗಟ್ಟುವಲ್ಲಿ ಹರಸಾಹಪಡುತ್ತಿದ್ದಾರೆ. ಜೆಡಿಎಸ್ ನ ಶೇಷಾದ್ರಿ ರಾಮು ಹಾಗೂ ಸಾಮಾಜಿಕ ಕಾರ್ಯಕರ್ತ ಭೈರವ ಮಾತನಾಡಿ ಈ ಕಾರ್ಖಾನೆಯಲ್ಲಿ ಆಗಾಗ ಬೆಂಕಿ ಅನಾಹುತಗಳು ಸಂಭವಿಸುತ್ತಿರುತ್ತವೆ ಯಾವುದೇ ರೀತಿಯ ಸೇಫ್ಟಿ ಪರಿಕರಗಳು ಈ ಕಾರ್ಖಾನೆಯಲ್ಲಿಲ್ಲ ಕಾರ್ಮಿಕರಿಗೆ ಯಾವಾಗಲೂ ಜೀವ ಭಯ ಕಾಡುತ್ತಿರುತ್ತದೆ ಕಳೆದ ನಾಲ್ಕು ವರ್ಷಗಳ ಹಿಂದೆ ಈ ಕಾರ್ಖಾನೆಗೆ ಬೆಂಕಿ ಬಿದ್ದು ಕೆಲವು ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದರು ಅಧಿಕಾರಿಗಳು ಈ ಕಾರ್ಖಾನೆಯನ್ನು ಮುಚ್ಚಿಸಲು ಮೀನ ಮೇಷ ಎಣಿಸುತ್ತಿದ್ದಾರೆ ಈ ಕಾರ್ಖಾನೆಯಲ್ಲಿ ಹೆಚ್ಚು ಪರಿಸರಕ್ಕೆ ಹಾನಿಯಾಗುತ್ತಿದ್ದು ಪರಿಸರ ಇಲಾಖೆ ಅಧಿಕಾರಿಗಳು ಕಂಡು ಕಾಣದಂತೆ ಇದ್ದಾರೆ ಜಾಣ ಮೌನ ತೋರಿರುವ ಅಧಿಕಾರಿಗಳು ಈ ಕಾರ್ಖಾನೆಯನ್ನು ಮುಚ್ಚಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.