ಹನೂರು: ತಾಲೂಕಿನ ಉದ್ದನೂರು ಗ್ರಾಮದ ಜಡೇಸ್ವಾಮಿ ದೇಗುಲದ ಬಳಿ ಗುರುವಾರ ಬಿದಿರು ಮೆಳೆಗೆ ತಗುಲಿದ್ದ ಬೆಂಕಿಯನ್ನು ಅಗ್ನಿ ಶಾಮಕ ದಳದ ಸಿಬ್ಬಂದಿ ನಂದಿಸಿದ್ದಾರೆ.
ದೇಗುಲ ಸಮೀಪದ ಬಿದಿರು ಮೆಳೆಗೆ ಬೆಂಕಿ ತಗುಲಿರುವ ಬಗ್ಗೆ ಗ್ರಾಮಸ್ಥರೊಬ್ಬರು ಅಗ್ನಿ ಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಸಿಬ್ಬಂದಿ ಗ್ರಾಮಸ್ಥರ ಸಹಕಾರ ಪಡೆದು ಕಾರ್ಯಾಚರಣೆ ನಡೆಸಿ ಹೆಚ್ಚಿನ ಅನಾಹುತ ತಡೆಗಟ್ಟಿದ್ದಾರೆ. ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಪ್ರಭಾರ ಠಾಣಾಧಿಕಾರಿ ಮಹೇಶ್, ಸಿಬ್ಬಂದಿ ಆನಂದ್, ಚಂದ್ರೇಗೌಡ, ಹರ್ಷ, ಬಸವರಾಜು, ಲಿಂಗೇಶ್ ಇದ್ದರು.