royal theater 
ಜಿಲ್ಲೆ

ಬಳ್ಳಾರಿ ರಾಯಲ್​ ಚಿತ್ರಮಂದಿರದಲ್ಲಿ ಅಗ್ನಿ ಅವಘಡ

mcbhadrashetti

ಬಳ್ಳಾರಿ: ನಗರದಲ್ಲಿರುವ ಹಳೆಯ ರಾಯಲ್​ ಚಿತ್ರಮಂದಿರದಲ್ಲಿ ತಡರಾತ್ರಿ ಅಗ್ನಿ ಅವಘಡ ಸಂಭವಿಸಿದೆ.

ಅನೇಕ ವರ್ಷಗಳಿಂದ ರಾಯಲ್​ ಚಿತ್ರಮಂದಿರ ಪಾಳು ಬಿದ್ದಿತ್ತು. ಇದರಲ್ಲಿ ಸಿನಿಮಾದ ಪೋಸ್ಟರ್​​​ ಮತ್ತು ಹಳೆಯ ವಸ್ತುಗಳನ್ನು ಇಡಲಾಗಿತ್ತು.

ಆದರೆ, ನಿನ್ನೆ ಯಾರೋ ಕಿಡಿಗೇಡಿಗಳು ಚಿತ್ರಮಂದಿರಕ್ಕೆ ಬೆಂಕಿ ಹಾಕಿದ್ದು, ಅಲ್ಲಿದ್ದ ವಸ್ತುಗಳೆಲ್ಲ ಸಂಪೂರ್ಣ ಸುಟ್ಟು ಭಸ್ಮವಾಗಿವೆ ಎಂದು ಅಗ್ನಿ ಶಾಮಕದಳದ ಇನ್ಸ್​ಪೆಕ್ಟರ್​ ಬಸವರಾಜ ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.