ಶಿರಸಿ: ಅಗ್ನಿ ಅವಘಡದಿಂದಾಗಿ ನಗರದ ನಟರಾಜ ರಸ್ತೆಯಲ್ಲಿರುವ ಫ್ಲೆಕ್ಸ್ ಪ್ರಿಂಟಿಂಗ್ ಮಳಿಗೆ ಸುಟ್ಟು ಕರಕಾಲದ ಘಟನೆ ಸೋಮವಾರ ನಡೆದಿದೆ.
ಸೀತಾರಾಮ ಎಂಬುವವರ ಕನ್ನಿಕಾ ಪ್ರಿಂಟರ್ಸ್ ಮಳಿಗೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದಾಗಿ ಘಟನೆ ನಡೆದಿರಬಹುದು ಎಂದು ಅಂದಾಜಿಸಲಾಗಿದೆ. ಮೂರು ಪ್ರಿಂಟಿಂಗ್ ಮಿಷನ್, ಯಂತ್ರೋಪಕರಣಗಳು, ಸಿದ್ಧಗೊಂಡಿದ್ದ ಫ್ಲೆಕ್ಸ್ ಹಾನಿಗೀಡಾಗಿವೆ. ಸ್ಥಳಕ್ಕೆ ಅಗ್ನಿ ಶಾಮಕ ದಳ ಆಗಮಿಸಿ ಬೆಂಕಿ ಆರಿಸಿದೆ.