ವಿಜಯವಾಣಿ ಸುದ್ದಿಜಾಲ ಮಂಗಳೂರು
ನಗರದ ಎಂ.ಜಿ ರಸ್ತೆಯಲ್ಲಿರುವ ಐಷಾರಾಮಿ ಹೊಟೇಲ್‌ನ ಮೇಲ್ಭಾಗದಲ್ಲಿ ಶುಕ್ರವಾರ ಸಂಜೆ ಬೆಂಕಿ ಹಾಗೂ ದಟ್ಟವಾದ ಹೊಗೆ ಕಾಣಿಸಿಕೊಂಡು ಕೆಲ ಕಾಲ ಆತಂಕ ಸೃಷ್ಟಿಸಿತು.
ಸಂಜೆ ಸುಮಾರು 6.45 ಕ್ಕೆ ಹೊಟೇಲ್ ಮೇಲ್ಭಾಗ ಅಗಲವಾದ ಕೊಳವೆ ದಟ್ಟವಾಗಿ ಹೊಗೆ ಉಗುಳಲು ಆರಂಭಿಸಿತು. ಜತೆಗೆ ಬೆಂಕಿಯ ಕಿಡಿ ಹಾರತೊಡಗಿತು.
ಹೊಟೇಲ್ ತಳ ಅಂತಸ್ತಿನ ಅಡುಗೆ ಕೋಣೆಯಲ್ಲಿ ತಂದೂರಿ ರೊಟ್ಟಿ ಸಿದ್ಧಪಡಿಸುವಾಗ ಬೆಂಕಿಯ ಕಿಡಿ ಕೊಳವೆ ಸೇರಿ ಒಳಗಿನ ಜಿಡ್ಡಿನ ಸಂಪರ್ಕ ಪಡೆದು ಒಂಭತ್ತು ಮಹಡಿ ಮೇಲೆ ಸಾಗಿದೆ. ಪಾಂಡೇಶ್ವರ ಅಗ್ನಿಶಾಮಕ ದಳದ ತಂಡ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ನಿಭಾಯಿಸಲು ನೆರವಾಯಿತು.