ಹೊನ್ನಾವರ: ತಾಲೂಕಿನ ಗುಣವಂತೆಯಲ್ಲಿ ಗುಜರಿ ಅಂಗಡಿಯಲ್ಲಿ ಅಗ್ನಿ ಅವಘಡ ಸಂಭವಿಸಿ ಅಂಗಡಿಯಲ್ಲಿದ್ದ ಗುಜರಿ ಸಾಮಾನುಗಳು ಹಾಗೂ ಅಂಡಿಯ ಸಮೀಪವಿದ್ದ ಲಾರಿಯು ಸಂಪೂರ್ಣ ಸುಟ್ಟುಕರಕಲಾದ ಘಟನೆ ಗುರುವಾರ ನಡೆದಿದೆ.
ಗುಜರಿ ಅಂಗಡಿ ಬಿದ್ದ ಬೆಂಕಿಯು ಹೊರಕ್ಕೆ ವ್ಯಾಪಿಸಿದ್ದರಿಂದಾಗಿ ಅಂಗಡಿ ಸಮೀಪವಿದ್ದ ಲಾರಿಯು ಸಂಪೂರ್ಣ ಸುಟ್ಟು ಹೋಗಿದೆ. ಅಗ್ನಿಅವಘಡಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳದಲ್ಲಿ ಮಂಕಿ ಪೊಲೀಸ್ ಸಿಬ್ಬಂದಿ ಬೀಡು ಬಿಟ್ಟಿದ್ದರು. ಹೆದ್ದಾರಿ ಪಕ್ಕವೇ ಬೆಂಕಿ ಹೊತ್ತಿಕೊಂಡಿದ್ದರಿAದ ಕೆಲಕಾಲ ಸಂಚಾರಕ್ಕೆ ವ್ಯತಯ ಉಂಟಾಯಿತು. ಹೊನ್ನಾವರದಿಂದ ಆಗಮಿಸಿದ ಅಗ್ನಿಶಾಮಕ ವಾಹನವು ಚಿಕ್ಕದಾಗಿರುವ ಕಾರಣ ಅಗ್ನಿ ನಂದಿಸಲು ಹರಸಾಹಸ ಪಡಬೇಕಾಯಿತು. ನೆರೆಯ ಭಟ್ಕಳದಿಂದ ಅಗ್ನಿಶಾಮಕ ವಾಹನ ಆಗಮಿಸಿದ ಬಳಿಕ ಬೆಂಕಿ ಸಂಪೂರ್ಣ ನಂದಿಸಲು ಸಾಧ್ಯವಾಯಿತು.