ರಾಯಚೂರು ನಗರದ ಬಸವೇಶ್ವರ ವೃತ್ತದ ಬಳಿಯ ಯೂನಿಯನ್ ಬ್ಯಾಂಕ್‌ನಲ್ಲಿ ಗುರುವಾರ ಬೆಳಗಿನ ಜಾವ ಶಾರ್ಟ್‌ಸರ್ಕ್ಯೂಟ್ ನಿಂದ ಬೆಂಕಿ ಅವಘಡ ಸಂಭವಿಸಿದ್ದು, ಬ್ಯಾಂಕ್‌ನಲ್ಲಿನ ವಸ್ತುಗಳು ಸುಟ್ಟು ಕರಕಲಾಗಿವೆ.
ಯುಪಿಎಸ್‌ನಲ್ಲಿ ವಿದ್ಯುತ್ ಏರಿಳಿತದಿಂದ ಉಂಟಾದ ಶಾರ್ಡ್ ಸರ್ಕ್ಯೂಟ್ನಿಂದ ಬ್ಯಾಂಕ್ ನಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಕಂಪ್ಯೂಟರ್‌ಗಳು ,ಎಸಿ , ಪೀಠೋಪಕರಣಗಳು ಹಾಗೂ ಕೆಲ ದಾಖಲೆಗಳು ಸೇರಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿವೆಂದು ಸಿಬ್ಬಂದಿ ತಿಳಿಸಿದ್ದಾರೆ.
ಲಾಕರ್‌ನಲ್ಲಿರುವ ಹಣ, ಚಿನ್ನಾಭರಣ, ದಾಖಲೆಗಳು ಸುರಕ್ಷಿತವಾಗಿದ್ದು ಹೊರಗಡೆಯ ವಸ್ತುಗಳು ಮಾತ್ರ ಸುಟ್ಟಿವೆ. ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.
ನಗರದ ಸದರ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.