ಜಿಲ್ಲೆ

ಅಗರಬತ್ತಿ ಘಟಕಕ್ಕೆ ಬೆಂಕಿ

ಕಲಬುರಗಿ: ಕೈಲಾಸ ನಗರದಲ್ಲಿನ ಅಗರಬತ್ತಿ ತಯಾರಿಕಾ ಘಟಕದಲ್ಲಿ ಶಾರ್ಟ್ ಸರ್ಕಿಟ್‌ನಿಂದ ಬೆಂಕಿ ಹೊತ್ತಿಕೊಂಡು ಲಕ್ಷಾಂತರ ರೂಪಾಯಿ ಮೌಲ್ಯದ ಅಗರಬತ್ತಿ ಸುಟ್ಟು ಭಸ್ಮವಾಗಿದೆ. ಚಂದ್ರಶೇಖರ ಸರಸಂಬಿ ಅವರಿಗೆ ಸೇರಿದ ಅಗರಬತ್ತಿ ತಯಾರಿಕಾ ಘಟಕದಲ್ಲಿ ಮಧ್ಯಾಹ್ನ ೨.೩೦ರ ಸುಮಾರಿಗೆ ಬೆಂಕಿ ಹತ್ತಿಕೊಂಡಿದೆ. ಕೆಲವೇ ನಿಮಿಷಗಳಲ್ಲಿ ಇಡೀ ಘಟಕಕ್ಕೆ ವ್ಯಾಪಿಸಿಕೊಂಡಿತು. ಅಗ್ನಿಶಾಮಕ ದಳ ಸಿಬ್ಬಂದಿ ದೌಡಾಯಿಸಿ ಬೆಂಕಿಯನ್ನು ನಂದಿಸಿದರು. ಅಮಾವಾಸ್ಯೆ ನಿಮ್ಮಿತ್ತ ಘಟಕವನ್ನು ಬಂದï ಮಾಡಿದ್ದರಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿz್ದÁರೆ. ಆರ್‌ಜಿ ನಗರ ಪೊಲೀಸï ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.