ಜಿಲ್ಲೆ

ಕರಡಿಗುಡ್ಡದಲ್ಲಿ ಬೆಂಕಿ ಅವಘಡ

ಸೋಮನಾಥ ರೆಡ್ಡಿ

ಉಪ್ಪಿನಬೆಟಗೇರಿ: ಕರಡಿಗುಡ್ಡ ಗ್ರಾಮದಲ್ಲಿ ಗುರುವಾರ ರಾತ್ರಿ ಸಂಭವಿಸಿದ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಗ್ರಾಮ ಒನ್ ಕೇಂದ್ರದ ಕಂಪ್ಯೂಟರ್ ಸೇರಿದಂತೆ ಹಲವು ವಸ್ತುಗಳು ಹಾಗೂ ಎಸ್.ಟಿ. ಕಾಲನಿಯಲ್ಲಿ ಹತ್ತಾರು ಮನೆಗಳ ಫ್ರಿಜ್, ಟಿವಿ, ಮೊಬೈಲ್ ಸೇರಿದಂತೆ ಹಲವಾರು ವಸ್ತುಗಳು ಸುಟ್ಟು ಕರಕಲಾಗಿವೆ. ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ವಿದ್ಯುತ್ ತಂತಿಯ ಮೇಲೆ ಹೊಲಗಳಲ್ಲಿ ಹಾದು ಹೋದ ವಿದ್ಯುತ್ ತಂತಿ ಹರಿದು ಬಿದ್ದಿರುವುದರಿಂದ ಘಟನೆ ನಡೆದಿದೆ ಎಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.