ಜಿಲ್ಲೆ

ಕಲ್ಲಕೊಪ್ಪದಲ್ಲಿ ಅಗ್ನಿ ಅವಘಡ ಎರಡು ಆಕಳು ಸಾವು

ಬಸವರಾಜ ವೀರಪ್ಪ ಗರಗ

ಮುಂಡಗೋಡ: ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಎರಡು ದನಗಳು ಮೃತಪಟ್ಟು, ಮತ್ತೆರಡು ದನಗಳು ತೀವ್ರ ಗಾಯಗೊಂಡ ಘಟನೆ ತಾಲೂಕಿನ ಕಲ್ಲಕೊಪ್ಪ ಗ್ರಾಮದಲ್ಲಿ ಗುರುವಾರ ಸಂಭವಿಸಿದೆ. ಗ್ರಾಮದ ಶಂಕರಗೌಡ ಮರಿಬಸಪ್ಪಗೌಡ ಇಂಗಳಗಿ ಎಂಬುವರಿಗೆ ಸೇರಿದ ದನಗಳು ಬೆಂಕಿಗಾಹುತಿಯಾಗಿವೆ. ಅಡಕೆ ತೋಟದಲ್ಲಿನ ಕೊಟ್ಟಿಗೆಯಲ್ಲಿ ನಾಲ್ಕು ದನಗಳನ್ನು ಕಟ್ಟಲಾಗಿತ್ತು. ಕೊಟ್ಟಿಗೆ ಸುಟ್ಟು, ದನಗಳು ಮೃತಪಟ್ಟಿದ್ದರಿಂದ ಲಕ್ಷಾಂತರ ರೂ. ಹಾನಿಯಾಗಿದೆ. ರಾತ್ರಿ ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರು ಬೆಂಕಿ ತಗುಲಿರುವುದನ್ನು ಗಮನಿಸಿ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಪಶುವೈದ್ಯಾಧಿಕಾರಿ ಭೇಟಿ ನೀಡಿ ಪರಿಶೀಲಿಸಿ, ಗಾಯಗೊಂಡ ದನಗಳಿಗೆ ಚಿಕಿತ್ಸೆ ನೀಡಿದ್ದಾರೆ.