ಧಾರವಾಡ: ನಗರದ ಸಿಬಿಟಿ ಹತ್ತಿರದ ಬೇಕರಿ ಅಂಗಡಿಯಲ್ಲಿ ಬೆಂಕಿ ಅನಾಹುತ ಸಂಭವಿಸಿದ್ದು, ಬೆಲೆ ಬಾಳುವ ವಸ್ತುಗಳು ಸುಟ್ಟು .ಕರಕಲಾದ ಘಟನೆ ಸೋಮವಾರ ತಡರಾತ್ರಿ ನಡೆದಿದೆ.
ಶ್ರೀ ದುರ್ಗಾ ಪರಮೇಶ್ವರಿ ಮಂದಾರ್ತಿ ಸ್ಟೋರ್ಸ್ ಬೇಕರಿಯಲ್ಲಿ ವಿದ್ಯುತ್ ಅವಘಡದಿಂದ ಬೆಂಕಿ ತಗುಲಿದೆ. ಬೇಕರಿ ತಿನಿಸುಗಳು ಮತ್ತು ತಯಾರಿಕಾ ಸಾಮಗ್ರಿ ಸೇರಿ ಅಂದಾಜು ೧೫ ಲಕ್ಷ ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯÁಗಿವೆ. ಜ್ಯೋತಿ ಶಿರಸಂಗಿ ಎಂಬುವರ ಬೇಕರಿ ಇದಾಗಿದ್ದು, ರಾತ್ರಿ ಕೀಲಿ ಹಾಕಿಕೊಂಡು ಹೋಗಿದ್ದ ವೇಳೆ ಬೆಂಕಿ ಕಾಣಿಸಿಕೊಂಡಿದೆ. ವಿಷಯ ತಿಳಿದು ಸ್ಥಳಕ್ಕೆ ತೆರಳಿದ್ದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಶಹರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.