Fire accident at police residence 
ಜಿಲ್ಲೆ

ಪೊಲೀಸ್ ವಸತಿ ಗೃಹದಲ್ಲಿ ಅಗ್ನಿ ಅವಘಡ

Vijayapura - Desk - Doddanagouda Gudihindin

ರಬಕವಿ/ಬನಹಟ್ಟಿ: ಬನಹಟ್ಟಿ ಪೊಲೀಸ್ ವಸತಿ ಗೃಹದ ಎರಡನೇ ಮಹಡಿಯ ಅಡುಗೆ ಮನೆಯೊಂದರಲ್ಲಿ ಸೋಮವಾರ ಬೆಳಗಿನ ಜಾವ ಬೆಂಕಿ ಹೊತ್ತಿಕೊಂಡು ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದೆ.

ಸಿಲಿಂಡರ್ ಕಟ್ಟಡದ ಹೊರಭಾಗದಲ್ಲಿ ಅಳವಡಿಸಲಾಗಿತ್ತಾದರೂ ಮನೆಯ ಗ್ಯಾಲರಿಯಲ್ಲಿ ಬೆಳಗಿನ ಜಾವ ನೀರು ಕಾಯಿಸುವ ಸಂದರ್ಭದಲ್ಲಿ ಬೆಂಕಿ ಹತ್ತಿ ಧಗಧಗ ಉರಿಯುತ್ತಿದ್ದಂತೆ ಕ್ಷಣಾರ್ಧದಲ್ಲಿ ಸಿಲಿಂಡರ್ ಸ್ಫೋಟಗೊಂಡಿದೆ.

ಅಪಘಡದಲ್ಲಿ ಆರ್.ಎಂ. ದಳವಾಯಿ ಎಂಬುವವರಿಗೆ ಅಲ್ಪ ಪ್ರಮಾಣದ ಗಾಯವಾಗಿದೆ. ಯಾವುದೇ ಪ್ರಾಣಹಾನಿಯಾಗಿಲ್ಲ. ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.